ಬೆಂಗಳೂರು:  18 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕಣದ ತೀರ್ಪು ಶನಿವಾರ ಹೊರಬಿದ್ದಿದ್ದು, ತಮಿಳುನಾಡು ಸಿಎಂ ತಪ್ಪಿತಸ್ಥೆ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.   66.65 ಕೋಟಿ ರೂಪಾಯಿಗಳ ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ದೋಷಿ ಎಂಬ ಪಟ್ಟ ಸಿಕ್ಕಿದೆ.

ಆದಾಯ ಮೀರಿದ ಆಸ್ತಿ ಗಳಿಕೆ ಸಂಬಂಧ 18 ವರ್ಷಗಳ ಹಿಂದಿನ ಪ್ರಕರಣದಲ್ಲಿ ಜಯಲಲಿತಾ ತಪ್ಪಿತಸ್ಥೆ ಎಂದು ಪರಪ್ಪನ ಅಗ್ರಹಾರ ಕಾರಾಗೃಹ ಸಮೀಪದ ಗಾಂಧಿ ಭವನದಲ್ಲಿ ಸ್ಥಾಪಿಸಲಾಗಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಾನ್‌ ಮೈಕಲ್‌ ಕುನ್ನಾ ಶನಿವಾರ ಮಧ್ಯಾಹ್ನ ಈ ತೀರ್ಪು ನೀಡಿದ್ದಾರೆ. ದೋಷಿಗಳು ಎಂದು ಸಾಬೀತಾಗಿದ್ದು, ಅವರಿಗೆ ನೀಡುವ ಶಿಕ್ಷೆ ಪ್ರಮಾಣದ ಇನ್ನಷ್ಟೇ ಪ್ರಕಟವಾಗಬೇಕಿದೆ. ನ್ಯಾಯಾಲಯ ತೀರ್ಪು ಪ್ರಕಟಿಸುವ ಸಂದರ್ಭ ಆರೋಪಿಗಳಾದ ಜಯಲಲಿತಾ, ಶಶಿಕಲಾ ನಟರಾಜನ್, ವಿ.ಎನ್. ಸುಧಾಕರನ್ ಮತ್ತು ಜೆ. ಇಳವರಸಿ ಖುದ್ದು ಹಾಜರಿದ್ದರು. 

jaya1

jaya2

jaya3



ಆರೋಪಿಗಳ ವಿರುದ್ಧ 1996ರಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯಿದೆ 1988ರ ಸೆಕ್ಷನ್ 13(2) ಹಾಗೂ 13(1)(ಇ) ಪ್ರಕಾರ ಪ್ರಕರಣ ದಾಖಲಿಸಲಾಗಿತ್ತು. 1997 ರಲ್ಲಿ ತನಿಖೆ ನಡೆಸಿ ಡಿಎವಿಸಿ ಎಲ್ಲರ ವಿರುದ್ಧವೂ 15 ಸಾವಿರ ಪುಟಗಳಷ್ಟು ಆರೋಪಪಟ್ಟಿ ಸಲ್ಲಿಸಿತ್ತು. ನಂತರ ಚೆನ್ನೈನಲ್ಲಿ ನಿಷ್ಪಕ್ಷಪಾತ ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ ಎಂದು ಡಿಎಂಕೆ ನಾಯಕ ಅನ್ಬಳಗನ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಿಂದ ನ್ಯಾಯಾಲಯ 2003ರಲ್ಲಿ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಿತ್ತು. 

ಸುಬ್ರಹ್ಮಣ್ಯನ್ ಸ್ವಾಮಿ ಭಾವಚಿತ್ರಕ್ಕೆ ಚಪ್ಪಲಿ ಏಟು:

ಹೊಸೂರು ರೋಡ್ ಬಳಿ ಜಮಾಯಿಸಿರುವ ಅಭಿಮಾನಿಗಳು ಅಮ್ಮನ ಪರ ಜೈಕಾರ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗುತ್ತಿರುವ ದೃಶ್ಯ ಒಂದೆಡೆಯಾದರೆ ಅವರ ಗಲಾಟೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿರುವ ದೃಶ್ಯ ಇನ್ನೊಂದೆಡೆ ಕಂಡು ಬಂತು.  ಈ ನಡುವೆ ನ್ಯಾಯಾಲಯದ ಆವರಣಕ್ಕೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ ಆಗಮಿಸಿದಾಗ, ಬ್ಯಾರಿಕೇಡ್‌ಗಳನ್ನು ತಳ್ಳಿ ನ್ಯಾಯಾಲಯದ ಆವರಣಕ್ಕೆ ನುಗ್ಗಲು ಅಭಿಮಾನಿಗಳು ಯತ್ನಿಸಿದರು. ಆಗ ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. 

ಜಯಾ ವಿರುದ್ಧ ಪ್ರಕರಣ ದಾಖಲಿಸಿದ್ದ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡುವ ಮೂಲಕ ಅಂಧಾಭಿಮಾನ ಮೆರೆದಿದ್ದಾರೆ. ಇತ್ತ ತಮಿಳುನಾಡುವಿನ ಜಯಾ ನಿವಾಸದಲ್ಲಿ ಕೇಸಿನನಲ್ಲಿ ಜಯಾಯಗೆ ಜಯ ಸಿಗುತ್ತದೆ ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಶೆ ಮೂಡಿದ್ದು, ಸುಡಲು ತಂದ ಪಟಾಕಿ ನೀರುಪಾಲು ಮಾಡಿದ್ದಾರೆ.

ವಿಮಾನದಲ್ಲಿ ಆಗಮನ: 
ಚೆನ್ನೈನಿಂದ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಬಂದಿಳಿದ ತಮಿಳುನಾಡಿನ ಸಿಎಂ ಜಯಾಲಲಿತಾ, ಕಾರನ್ನೇರಿ ನೇರವಾಗಿ ಪರಪ್ಪನ ಅಗ್ರಹಾರದ ನ್ಯಾಯಾಲಯದತ್ತ ತೆರಳಿದರು. ಜಯಾಲಲಿತಾ ಅವರಲ್ಲದೆ, ಅವರ ಆಪ್ತ ಸ್ನೇಹಿತೆ ವಿ.ಕೆ.ಶಶಿಕಲಾ, ಸಂಬಂಧಿ ಸುಧಾಕರನ್, ಇಳವರಸಿ ಅವರೂ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ದೋಶಿ ಎಂದು ಸಾಬೀತಾದರೂ ಮಂದಸ್ಮಿತೆ ಅಮ್ಮ:

ತೀರ್ಪು ಇದೇ ರೀತಿ ಬರಬಹುದು ಎಂದು ನಂಬಿದ್ದ ಜಯಲಲಿತಾ ಅವರು ತೀರ್ಪು ಹೊರಬಂದ ನಂತರವೂ ಮಂದಸ್ಮಿತರಾಗಿಯೇ ಇದ್ದರು. ಪರಪ್ಪನ ಅಗ್ರಹಾರದ ಕೋರ್ಟಿನಿಂದ ಹೊರಬಂದ ನಂತರವೂ ಜಯಲಲಿತಾ ಯಾವುದೇ ದುಃಖವನ್ನು ತೋರ್ಪಡಿಸಿದೆ ಸ್ಮಿತವದನದಲ್ಲಿ ಕಂಡುಬಂದರು.

 ರಾಜೀನಾಮೆ ಸಾಧ್ಯತೆ:

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ತಮಿಳುನಾಡು ಸಿಎಂ ಜಯಲಲಿತಾರ ಶಾಸಕತ್ವ ಕೋರ್ಟ್ ರದ್ದುಗೊಳಿಸಿದೆ. ಪ್ರಜಾಪ್ರತಿನಿಧಿ ಕಾಯ್ದೆಯಡಿ ಕೋರ್ಟ್ ಈ ಆದೇಶ ನೀಡಿದ್ದು, ಮುಂದಿನ 6 ವರ್ಷ ಜಯಲಲಿತಾ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಸಾರ್ವಜನಿಕ ಹುದ್ದೆ ಹೊಂದುವಂತಿಲ್ಲ. ಹೀಗಾಗಿ, ಜಯಲಲಿತಾ ಸಿಎಂ ಪದವಿಯನ್ನೂ ಕಳೆದುಕೊಂಡಿದ್ದಾರೆ. 

By suddi9

Leave a Reply

Your email address will not be published. Required fields are marked *