ಬಂಟ್ವಾಳ:  ಧನಾತ್ಮಕ ಚಿಂತನೆಯ ಮೂಲಕ ವ್ಯಕ್ತಿ ಉನ್ನತವಾದ ಸ್ಥಾನ ಪಡೆಯಲು ಸಾಧ್ಯ ಎಂಬುದಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವ ಆದರ್ಶಗಳೇ ಸಾಕ್ಷಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಹೇಳಿದ್ದಾರೆ.   ಬಿ.ಸಿ.ರೋಡಿನ ಮಿನಿವಿಧಾನಸೌಧದಲ್ಲಿ ಶುಕ್ರವಾರ ನಡೆದ  ಬಂಟ್ವಾಳ ತಾಲೂಕು ಮಟ್ಟದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ನಾರಾಯಣಗುರುಗಳ ಚಿಂತನೆ,ತತ್ವಾದರ್ಶಗಳು ಕೇವಲ  ಒಂದು ಜಾತಿಗೆ ಸೀಮಿತವಲ್ಲ,ಒಟ್ಟು ಸಮಾಜಕ್ಕೆ  ಮಾದರಿಯಾಗಿದೆ ಎಂದರು.

IMG-20190913-WA0059
ಬಂಟ್ವಾಳ ತಾಲೂಕು ಪಂಚಾಯತ್ ಆಧ್ಯಕ್ಷ ಚಂದ್ರಹಾಸ ಕರ್ಕೇರ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಧಾನ ಭಾಷಣಕಾರರಾಗಿದ್ದ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕ ಮಹೇಶ್ ಕುಮಾರ್ ವಿ.ಕರ್ಕೇರಾ ಮಾತನಾಡಿ, ಇಂದು  ನಮ್ಮ ಕುಟುಂಬ,ಪೂರ್ವಜರ ಇತಿಹಾಸವನ್ನು ಅರಿತುಕೊಳ್ಳುವ ಅವಶ್ಯಕತೆ ಇದೆ ಎಂದರು.ಧಾರ್ಮಿಕ,ಸಾಮಾಜಿಕ,ಶೈಕ್ಷಣಿಕ ರಂಗದಲ್ಲಿ ಸುಧಾರಣೆ ತಂದಿರುವ ನಾರಾಯಣ ಗುರುಗಳ ಚಿಂತನೆಗಳು ಇಡೀ ಪ್ರಪಂಚಕ್ಕೆ ಮಾಸರಿಯಾಗಿದೆ ಎಂದು ವಿಶ್ಲೇಷಿಸಿದರು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ, ಜಿ.ಪಂ.ಸದಸ್ಯರಾದ ಎಂ.ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಕಮಲಾಕ್ಷಿ ಕೆ.ಪೂಜಾರಿ,  ಬಂಟ್ವಾಳತಹಶೀಲ್ದಾರ್ರಶ್ಮಿ.ಎಸ್.ಆರ್. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅತಿಥಿಯಾಗಿ ಭಾಗವಹಿಸಿದ್ದರು.  ತಾ.ಪಂ.ಸದಸ್ಯರು,ಬಿಲ್ಲವ ಸಮಾಜದ ಮುಖಂಡರು,ವಿದ್ಯಾರ್ಥಿ ಸಮೂಹ ಭಾಗವಹಿಸಿದ್ದರು.ಬಂಟ್ವಾಳ ಕಂದಾಯ ನಿರೀಕ್ಷಕ ನವೀನ್ ಬೆಂಜನ್ ಪದವು ಸ್ವಾಗತಿಸಿ,ವಂದಿಸಿದರು.

 

By Suddi9

Leave a Reply

Your email address will not be published. Required fields are marked *