ಜೇಸಿಐ ಪರ್ಕಳದ ಜೇಸಿ ಸಪ್ತಾಹದ ಅಂಗವಾಗಿ ಸ್ಥಳೀಯ ವಲಸೆ ಕಾರ್ಮಿಕರ ವಸತಿ ಪ್ರದೇಶದಲ್ಲಿ ಬಾಯಿ ಮತ್ತು ದಂತ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಸೆಪ್ಟೆಂಬರ್ 9 ರಂದು ಅಪರಾಹ್ನ ನಡೆದ ಈ ಕಾರ್ಯಕ್ರಮದಲ್ಲಿ ಘಟಕದ ಜೂನಿಯರ್ ಜೇಸಿ ಸದಸ್ಯೆ, ದಂತ ವಿದ್ಯಾರ್ಥಿನಿ ಕುಮಾರಿ ಲಾಸ್ಯ ಶಿವಾನಂದ ಶೆಟ್ಟಿಗಾರ್ ಸಂಪನ್ಮೂಲ ವ್ಯಕ್ತಿಯಾಗಿ ಉಪಯುಕ್ತ ಮಾಹಿತಿ ನೀಡಿದರು.
ವಲಯಾಧಿಕಾರಿ ಜೇಸಿ ಆಶಾ ಬಿ. ಘಟಕಾಧ್ಯಕ್ಷೆ ಜೇಸಿ ವಿನುತಾ, ಕಾರ್ಯದರ್ಶಿ ಜೇಸಿ ಪಲ್ಲವಿ ರಾಜೇಶ್, ಜೇಸಿರೆಟ್ ಅಧ್ಯಕ್ಷೆ ಪವಿತ್ರಾ, ಜೂನಿಯರ್ ಜೇಸಿ ಅಧ್ಯಕ್ಷೆ ಸಂಯುಕ್ತ ಉಪಸ್ಥಿತರಿದ್ದರು.


