ಉಡುಪಿ: ಚಂದ್ರಯಾನ-2 ಮಿಷನ್ ಸಂಬಂಧಿಸಿದಂತೆ ಇಸ್ರೋ ವಿಜ್ಞಾನಿಗಳು ನಡೆಸಿದ ಅಪ್ರತಿಮ ಸಾಹಸವನ್ನು ಮುಕ್ತ ಕಂಠದಿಂದ ಶ್ಲಾಘಿಸಿ ಇಸ್ರೋ ವಿಜ್ಞಾನಿಗಳ ಕಾರ್ಯವನ್ನು ಸಾರ್ವಜನಿಕವಾಗಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಶ್ಲಾಘಿಸಿ ಅಭಿನಂದಿಸಲಾಯಿತು. ಚೊಚ್ಚಲ ಪ್ರಯತ್ನದಿಂದ ಈ ಮಟ್ಟದಲ್ಲಿ ಯಶಸ್ಸು ಗಳಿಸಿ ಕೂದಲೆಳೆಯಲ್ಲಿ ಆಗಿರುವ ಘಟನೆ ಮುಂದಿನ ಅಭಿಯಾನಕ್ಕೆ ಪ್ರೇರಣೆ ಆಗಲಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ವಿಜ್ಞಾನಿಗಳ ಕಾರ್ಯಕ್ಕೆ ಸಿಗುತ್ತಿರುವ ಶ್ಲಾಘನೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ ನಮ್ಮ ಶಕ್ತಿಯನ್ನು ಅನಾವರಣಗೊಳಿಸಿದೆ ಎಂದು ಗಣೇಶ್ ಪ್ರಸಾದ್ ಹೇಳಿದರು.
ಈ ಸಂದರ್ಭದಲ್ಲಿ ಜೇಸಿಐ ಉಡುಪಿ ಸಿಟಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್, ಬಂಧನ್ ಬ್ಯಾಂಕಿನ ಗುರುದತ್, ಚಿತ್ತರಂಜನ್, ಅಭಿಷೇಕ್, ಅಕ್ಷಯ್, ಹಿರಿಯ ನಾಗರಿಕ ವೇದಿಕೆಯ ಜಂಟಿ ಕಾರ್ಯದರ್ಶಿ ಸದಾನಂದ ಶೆಟ್ಟಿ, ಮಾಜಿ ಸೈನಿಕ ವಾದಿರಾಜ್ ಹೆಗ್ಡೆ, ಮಣಿಪುರ ಗ್ರಾಮ ಪಂಚಾಯತಿನ ಸಚಿನ್, ಚೇತನ್, ಉದಯ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
