ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿಯಿಂದ  ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ವಠಾರದಲ್ಲಿ 4 ದಿನಗಳ ಕಾಲ ಆರಾಧಿಸಲ್ಪಟ್ಟ ಶ್ರೀ ಗಣೇಶನ ವೈಭವಪೂರ್ಣ ಶೋಭಾಯಾತ್ರೆ ಗುರುವಾರ ರಾ ತ್ರಿ ನಡೆಯಿತು. ಆರಾಧನಾ ಸ್ಥಳದಿಂದ ಹೊರಟ ಶೋಭಾಯಾತ್ರೆಯ ಬ್ರಹ್ಮರಕೊಟ್ಲು ಸಮೀಪದ ತಲಪಾಡಿಯ ಗಣಪತಿ ಕಟ್ಟೆಯವರೆಗೆ ಸಾಗಿ ಅಲ್ಲಿ ಪೂಜೆ ಪುನಸ್ಕಾರದ ಬಳಿಕ ಆದೇ ದಾರಿಯಾಗಿ ಬಂದು ಮೊಡಂಕಾಪುವರೆಗೆ ತೆರಳಿ ನಂತರ ವಾಪಾಸ್ ಬಂದು ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ಸಂಚರಿಸಿ,ಗಾಣದಪಡ್ಪು ಭಂಡಾರಿಬೆಟ್ಟು ಬಳಿ ನೆರೆವಿಮೋಚನಾ ರಸ್ತೆಯಲ್ಲಿ ಸಾಗಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ನೇತ್ರಾವತಿನದಿಯಲ್ಲಿ ಗಣೇಶನ ವಿಗ್ರಹವನ್ನು ಜಲಸ್ತಂಭನಗೊಳಿಸಲಾಯಿತು.IMG_6771

IMG_6711

IMG_6738

IMG_6747

IMG_6761

IMG_6724ವಿವಿಧ ಸಂಘ,ಸಂಸ್ಥೆಗಳ ಸ್ತಬ್ದ ಚಿತ್ರ,ಟ್ಯಾಬ್ಲೋ,ಹುಲಿ ವೇಷ ,ಚಿಲಿಪಿಲಿಗೊಂಬೆಕುಣಿತ,ಕೀಲುಕುದರೆ ನೃತ್ಯ ಶೋಭಾಯಾತ್ರೆಗೆ ಮೆರಗು ನೀಡಿತು. ಶ್ರೀಗಣೇಶನ ಮೆರವಣಿಗೆ ಹೊರಡುವ ಸಂದರ್ಭ ವರುಣನು ಕೃಪೆ ತೋರಿದರಿಂದ ಸಾವಿರಾರು ಭಕ್ತರು ಕಣ್ಮನ ತುಂಬಿಕೊಂಡರು.ಸುಡುಮದ್ದ ಪ್ರರ್ಶನ ಮನಸೂರೆಗೊಂಡಿತು. ಸಮಿತಿಪದಾಧಿಕಾರಿಗಳು ಶೋಭಾಯಾತ್ರೆಯ ನೇತೃತ್ವ ವಹಿಸಿದ್ದರು.

By suddi9

Leave a Reply

Your email address will not be published. Required fields are marked *