ಬಂಟ್ವಾಳ: ಮೆಲ್ಕಾರ್ ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ನಿಯಮಿತವು  ೨೦೧೮-೧೯ ನೇ ಸಾಲಿನಲ್ಲಿ  ೪೫ ಕೋ.ರೂ.ವ್ಯವಹಾರ ನಡೆಸಿ ೧೪,೦೫,೦೩೩ ರೂ. ನಿವ್ವಳ ಲಾಭಗಳಿಸಿದೆ ಎಂದು ನಿಯಮಿತದ  ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್    ತಿಳಿಸಿದ್ದಾರೆ.  ಸಂಘದ ಆವರಣದಲ್ಲಿ ನಡೆದ ಸಂಘದ ವಾರ್ಷಿಕ  ಮಹಾಸಭೆಯ  ಅಧ್ಯಕ್ಷತೆ ವಹಿಸಿ ಮಾತ ನಾಡಿದ  ಅವರು ಸದಸ್ಯರಿಗೆ ೧೩% ಡಿವಿಡೆಂಟ್ ನ್ನು ಘೋಷಿಸಿ  ಸಹಕಾರ ಸಂಘದ ಅಭಿವೃದ್ಧಿಗೆ  ಸದಸ್ಯರ ಸಹಕಾರ ಯಾಚಿಸಿದರು.

DSC_0207 (1)ಸಂಘದ ಉಪಾಧ್ಯಕ್ಷ  ಕೆ. ಹರಿಕೃಷ್ಣ ಬಂಟ್ವಾಳ್ ರವರು ಮಾತನಾಡಿ, ಸಂಘವು ೧೦ ಕೋಟಿ ರೂ. ಠೇವಣಿ ಸಂಗ್ರಹಿಸಿ ೯ ಕೋಟಿ ಸಾಲ ನೀಡಿದ್ದು,ಮುಂದಿನ ವರ್ಷದಲ್ಲಿ ೧೨ ಕೋಟಿ ಠೇವಣಿ ಸಂಗ್ರಹದ ಗುರಿ ಹೊಂದಲಾಗಿದೆ ಮತ್ತು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಅವರು ಗತವರ್ಷದ  ವರದಿ ಮತ್ತು ಲೆಕ್ಕಪತ್ರಗಳನ್ನು ಸಭೆಯಲ್ಲಿ ಮಂಡಿಸಿದರು.  ನಿರ್ದೇಶಕರಾದ ಕೆ. ಸಂಜೀವ ಪೂಜಾರಿ  . ರತ್ನಾಕರ ನಾಡಾರು , ಸಂತೋಷ್ ಕುಮಾರ್ ಕೊಟ್ಟಿಂಜ, ನಾರಾಯಣ ಪೂಜಾರಿ ಬೊಳ್ಳುಕಲ್ಲು,  , ಉಮೇಶ್ ಸುವರ್ಣ ತುಂಬೆ , ರತ್ನಾಕರ ಪೂಜಾರಿ ಮೆಲ್ಕಾರ್ , .ಪುಷ್ಪಾವತಿ,  ತುಳಸಿ ಇರಾ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ ಕಾರ‍್ಯಕ್ರಮ ನಿರ್ವಹಿಸಿದರು ಮತ್ತು ಕಕ್ಯಪದವು ಶಾಖಾ ವ್ಯವಸ್ಥಾಪಕ ಚರಣ್ .ಕೆ.  ವಂದಿಸಿದರು.

By suddi9

Leave a Reply

Your email address will not be published. Required fields are marked *