ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಪೇಟೆ ನಿವಾಸಿ, ವಿವಿಧ ಪತ್ರಿಕೆಗಳ ವಿತರಕ ಹಾಗೂ ಹಿರಿಯ ವರ್ತಕ ಆರ್.ಕೇಶವ ಪೈ ಇವರ ಪತ್ನಿ ಗೀತಾ ಕೇಶವ ಪೈ (75) ಇವರು ಅಸೌಖ್ಯದಿಂದ ಶುಕ್ರವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ ಪತಿ ಸಹಿತ ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ರಾಯಿ ಮನೆ ಸಮೀಪದಲ್ಲಿ ಶುಕ್ರವಾರ ಮಧ್ಯಾಹ್ನ ನೆರವೇರಿತು.
