ಬಂಟ್ವಾಳ: ಸಂಸ್ಕøತ ಭಾಷೆ ಭಾರತದ ಸಂಸ್ಕøತಿ-ಪರಮಪರೆಗೆ ಅನನ್ಯ ಕೊಡುಗೆ ನೀಡಿದೆ. ಇತರೆಲ್ಲ ಭಾಷೆಗಳಿಗೆ ಮಾತೃ ಸಮಾನವಾದ ಭಾಷೆ ಎಂದು ವಿದ್ವಾನ್ ಡಾ. ಸತ್ಯಕೃಷ್ಣ ಭಟ್ ಹೇಳಿದರು.ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜಿನ ಸಂಸ್ಕøತ ಸಂಘದ ವತಿಯಿಂದ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಂಸ್ಕøತದಿಂದ ಸಂಸ್ಕøತಿ’ ಎಂಬ ವಿಷಯದ ಕುರಿತು ಮಾತನಾಡಿದರು.BTL 01

ಜೀವನದ ಎಲ್ಲ ಕ್ಷೇತ್ರಗಳಲ್ಲಿರುವ ಜ್ಞಾನಭಂಡಾರವು ಸಂಸ್ಕøತ ಭಾಷೆ ಮತ್ತು ಅದರ ಸಾಹಿತ್ಯದಲ್ಲಿದೆ. ವಿಜ್ಞಾನ, ತಂತ್ರಜ್ಞಾನ, ಶಿಲ್ಪಶಾಸ್ತ್ರ, ಆರೋಗ್ಯ, ಕೃಷಿ, ಅರ್ಥಶಾಸ್ತ್ರ, ಹೀಗೆ ವಿವಿಧ ವಲಯದಲ್ಲಿ ಸಂಸ್ಕøತದ ಪ್ರಭಾವ ಇದೆ. ಒಳ್ಳೆಯ ಸಂಸ್ಕøತಿಯುಳ್ಳ ಭಾರತವು ವಿಶ್ವಕ್ಕೆ ಗುರುವಾಗಿದೆ ಎಂದು ಹೇಳಿದರು.ಬಂಟ್ವಾಳ ಎಸ್.ವಿ.ಎಸ್.ಪ.ಪೂ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದರು.ಸಂಸ್ಕøತ ಭಾಷಾ ಉಪನ್ಯಾಸಕ ಮತ್ತು ಸಂಸ್ಕøತ ಸಂಘದ ಅಧ್ಯಕ್ಷ ವಿದ್ವಾನ್ ವಾಸುದೇವ ಕಾರಂತ್ ಅತಿಥಿ ಪರಿಚಯದೊಂದಿಗೆ ಸ್ವಾಗತಿಸಿದರು. ಸಂಸ್ಕøತ ಸಂಘದ ಕಾರ್ಯದರ್ಶಿ ಪ್ರಿಯಾ ವಂದಿಸಿ, ವಿದ್ಯಾರ್ಥಿನಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *