ಕೋಲಾರ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಶನಿವಾರ ನಡೆದ ಮಿನಿ ಉದ್ಯೋಗ ಮೇಳದಲ್ಲಿ ಹಲವಾರು ಕಂಪನಿಗಳು ಪಾಲ್ಗೊಂಡಿದ್ದು, 137 ಮಂದಿಗೆ ಉದ್ಯೋಗ ಲಭಿಸಿದ್ದು, 139 ಮಂದಿ ತರಬೇತಿಗೆ ಆಯ್ಕೆಯಾಗಿದ್ದಾರೆ ಎಂದು ಇಲಾಖೆಯ ಪ್ರಭಾರ ಅಧಿಕಾರಿ ಮುನಿಕೃಷ್ಣ ತಿಳಿಸಿದ್ದಾರೆ.ಉದ್ಯೋಗ ಅಭಿವೃದ್ದ ಕಾರ್ಯನಿರ್ವಾಹಕಿ ಸುನಿತಾ, ಈ ಸಂಬಂಧ ಮಾಹಿತಿ ನೀಡಿದ್ದು, ಬೆಂಗಳೂರಿನ ಚೋಳ ಜನರಲ್ ವಿಮಾ ಕಂಪನಿ, 10 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದೆ, ಆದಿತ್ಯ ಬಿರ್ಲಾ ಸನ್‍ಲೈಫ್ ಕ್ಯಾಪಿಟಲ್ ಕಂಪನಿ35 ಮಂದಿಗೆ ಉದ್ಯೋಗ ಮತ್ತು 33 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ. 1kolar6

ಬೆಂಗಳೂರಿನ ಹೆಚ್‍ಡಿಎಫ್‍ಸಿ ಬ್ಯಾಂಕ್‍ವತಿಯಿಂದ 7 ಮಂದಿಗೆ ಉದ್ಯೋಗ ಹಾಗೂ 9 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ, ಝೋಮೋಟೋ ಕಂಪನಿಯಿಂದ 15 ಮಂದಿಗೆ ಉದ್ಯೋಗ ಹಾಗೂ 20 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.ಉಬೇರ್ ಕಂಪನಿ 6 ಮಂದಿಗೆ ಉದ್ಯೋಗ ಹಾಗೂ 4 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಂಡಿದ್ದರೆ, ವೆರಿಫೈಡ್ ಜಾಬ್ಸ್ ಇಂಡಿಯಾ ಕಂಪನಿ19 ಮಂದಿಗೆ ಕೆಲಸ ಹಾಗೂ 23 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿಕೊಂಡಿದೆ.ಅದೇ ರೀತಿ ಸ್ಪಂದನಾ ಬ್ರೈಟ್ ಫ್ಯೂಚರ್ ಇನೋವೇಷನ್ ಕಂಪನಿ 35 ಮಂದಿಗೆ ಉದ್ಯೋಗ ಹಾಗೂ 50 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.
ಮೇಳದಲ್ಲಿ ಸಿಬ್ಬಂದಿ ವೆಂಕಟೇಶ್ ಹಾಜರಿದ್ದು, ವಿವಿಧ ಕಂಪನಿಗಳ ಅಧಿಕಾರಿಗಳು ಇಡೀ ದಿನ ಸಂದರ್ಶನ ನಡೆಸಿ ಆಯ್ಕೆ ಪ್ರಕ್ರಿಯೆ ಮುಗಿಸಿದರು.

By suddi9

Leave a Reply

Your email address will not be published. Required fields are marked *