ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು ನಿವಾಸಿ, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಶರೀರಕ್ರಿಯಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ದಾಮೋದರ ಗೌಡ ಕೆ.ಎಂ. ಇವರು ಅಮೇರಿಕಾದ ಗೇನೆಸ್‍ವಿಲ್ಲಿ ಯೂನಿವರ್ಸಿಟಿ ಆಫ್ ಫ್ಲಾರಿಡಾ ಸಂಸ್ಥೆಯಲ್ಲಿ ಉನ್ನತ ಸಂಶೋಧನೆಗಾಗಿ ಫೆಲೋಶಿಪ್‍ಗೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
