ಬಂಟ್ವಾಳ: ದ.ಕ ಜಿಲ್ಲೆ ದೇವತಾರಾಧಕರ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ನಡೆಯಷ್ಟು ಧಾರ್ಮಿಕ ಚಟುವಟಿಕೆಗಳು ಬೇರೆ ಯಾವ ಜಿಲ್ಲೆಯಲ್ಲು ನಡೆಯುತ್ತಿಲ್ಲ,ಈ ದೆಸೆಯಲ್ಲಿ  ದ.ಕ.ಜಿಲ್ಲೆಯನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ  ಇನ್ನೂ ಆಕರ್ಷಣೀಯಗೊಳಿಸುವ ಚಿಂತನೆ ಇದೆ ಎಂದು ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಹೇಳಿದರು. ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಭ ಕ್ಷೇತ್ರದಲ್ಲಿ ಸೋಮವಾರ ನೇತ್ರಧಾರಾ ಸಭಾಂಗಣ ಹಾಗೂ ಅಕ್ಷಯ ಪಾಕಶಾಲೆಯ ಲೋಕಾರ್ಪಣೆಯ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.IMG-20190819-WA0025 (1)

ಪಾಣೆಮಂಗಳೂರಿನ ವೀರವಿಠಲ,ಹನುಮಾನ್ ದೇವಸ್ಥಾನ ಹಾಗೂ ಶ್ರೀ ಕ್ಷೇತ್ರ ನಂದಾವರಕ್ಕೆ ಸಂಪರ್ಕರಸ್ತೆ, ಇಲ್ಲಿನ ತಡೆಗೋಡೆ ನಿರ್ಮಾಣಕ್ಕೆ  ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆಯಿತ್ತ ಶಾಸಕ ರಾಜೇಶ್ ನಾಯ್ಕ  ದೇವಸ್ಥಾನ, ಶಾಲೆಯಲ್ಲಿ ರಾಜಕೀಯ ದೂರ ಇಟ್ಟು, ಒಟ್ಟಾಗಿ ಕೆಲಸ ಮಾಡಿದಾಗ ಆ ಕ್ಷೇತ್ರ ಮತ್ತು ಗ್ರಾಮದ ಅಭಿವೃದ್ಧಿಯಾಗಲು ಸಾಧ್ಯ ಎಂದರು.63746db8-bbc0-4256-9a17-2846341eb4c0

ಮಾಜಿ ಸಚಿವ ಬಿ.ರಮಾನಾಥ ರೈ “ನೇತ್ರದಾರ ಸಭಾಂಗಣ” ಉದ್ಘಾಟಿಸಿದರು.ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ “ಅಕ್ಷಯ ಪಾಕಶಾಲೆ” ಉದ್ಘಾಟಿಸಿದರು.   ಅತಿಥಿಯಾಗಿ ಭಾಗವಹಿಸಿದ್ದ ವಿಧಾನಪರಿಷತ್ ಸದಸ್ಯ ಮಾತನಾಡಿ ದೇವಳದ ನಿಯೋಜಿತ ಸಮುದಾಯ ನಿರ್ಮಾಣಕ್ಕೆ ತನ್ನ ಶಾಸಕರ ನಿಧಿಯಿಂದ 5 ಲಕ್ಷ ಅನುದಾನ ಒದಗಿಸುವುದಾಗಿ ಪ್ರಕಟಿಸಿದರು. ಉದ್ಯಮಿ ರವೀಂದ್ರನಾಥ ಭಂಡಾರಿ ಪುಣ್ಕೆಮಜಲು, ಬಂಟವಾಳ ಬಂಟರ ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ನಂದಾವರ ಕ್ಷೇತ್ರದ ಅಭಿವೃದ್ದಿಯಲ್ಲಿ ಸಂಪೂರ್ಣ ಸಹಕಾರ ನೀಡುವ ಭರವಸೆಯಿತ್ತರು.KAR_2973 (1)

bd15ba6a-b2d7-44e1-9e1f-68574d6f16fd
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ 92 ಲಕ್ಷ ರೂಪಾಯಿ ವೆಚ್ಚದಲ್ಲಿ ನೇತ್ರಧಾರಾ,ಅಕ್ಷಯ ಪಾಕಶಾಲೆಯನ್ನು ನಿರ್ಮಿಲಾಗಿದೆ.  ಮುಂದಿನ ಜನವರಿಯಲ್ಲಿ ನಿಯೋಜಿತ ಸಮುದಾಯಭವನವನ್ನು ಲೋಕಾರ್ಪಣೆಗೊಳಿಸಲು ಸಮಿತಿ ಯೋಚಿಸಿದ್ದು,ಈ ನಿಟ್ಟಿನಲ್ಲಿ ಮಾಗಣೆಯ ಮತ್ತು ದಾನಿಗಳ ಸಹಕಾರವನ್ನು ಯಾಚಿಸಿದರು. ಗುತ್ತಿಗೆದಾರ ಬಿ.ಕೆ. ಆನಂದ ಹಾಗೂ ವಿದ್ಯುತ್ ಗುತ್ತಿಗೆದಾರ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.ಕಾರ್ಯನಿರ್ವಾಹಣಾಧಿಕಾರಿ ಹರೀಶ್ಚಂದ್ರವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಭಾಕರ ಶೆಟ್ಟಿ, ಮೋಹನದಾಸ್ ಪೂಜಾರಿ,ಅಣ್ಣುನಾಯ್ಕ ನಗ್ರಿ, ರಮಾ ಎಸ್.ಭಂಡಾರಿ ಪ್ರಧಾನ ಅರ್ಚಕ ಮಹೇಶ್ ಭಟ್ ವೇದಿಕೆಯಲ್ಲಿದ್ದರು. ಸಮಿತಿ ಸದಸ್ಯ ಡಾ.ಗೋಪಾಲಕೃಷ್ಣ ಆಚಾರ್ಯ ವಂದಿಸಿದರು.
ಬಾಲಕೃಷ್ಣ ಶೆಟ್ಟಿ ಕೋಡಾಜೆ ಕಾರ್ಯ ಕ್ರಮ ನಿರೂಪಿಸಿದು.

By Suddi9

Leave a Reply

Your email address will not be published. Required fields are marked *