ಬಂಟ್ವಾಳ: ಕಾಶ್ಮೀರದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರ ಶ್ಲಾಘನೀಯವಾಗಿದೆ ಎಂದು ಮನ್ನಥ್ ಶೆಟ್ಟಿ ಪುತ್ತೂರು ಅವರು ಹೇಳಿದ್ದಾರೆ. ಬುಧವಾರ ರಾತ್ರಿ ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಬಳಿ ನಡೆದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಸಭಾಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು ಭಾರತ ಅಖಂಡವಾಗಬೇಕು ಎಂಬ ಆಸೆ ಇದ್ದರೆ ಅದು ಹಿಂದೂಗಳಿಗೆ ಮಾತ್ರ ಎಂದರು.

ಇತಿಹಾಸದಲ್ಲಿ ಕೆಲವೊಂದು ಸತ್ಯ ವಿಚಾರಗಳನ್ನು ಮರೆಮಾಚಲಾಗಿದೆ. ಭಾರತ ಬದಲಾವಣೆ ಅಗುತ್ತಿದೆ, ಸೈನಿಕರಿಗೂ ನಿಜವಾದ ಗೌರವ ಸಿಗುತ್ತಿದ್ದು,ಭಾರತ ಅಖಂಡವಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿದ್ದ ಬಂಟ್ಬಾಳ ತಿರುಮಲ ವೆಂಕಟರಮಣ ದೇವಸ್ಥಾನ ದ ಆಡಳಿತ ಮೊಕ್ತೇಸರ ಪುರುಷೋತ್ತಮ ಶೆಣೈ ಮಾತನಾಡಿ,
ರಾಷ್ಟ್ರ ಭಕ್ತರು, ಯೋಧರಿಗೆ ಅವಮಾನಿಸುವುದು ಸಲ್ಲದು, ಇದರ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿದಾಗ ಮಾತ್ರ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು. ಇದೇ ವೇಳೆ ಈದ್ಗಾ ಮೈದಾನದ ಘಟನೆಗೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಮತ್ತು ಈದ್ಗಾ ಮೈದಾನದ ಹೋರಾಟದ ಮುಂಚೂಣಿಯ ಲ್ಲಿದ್ದ ಹಿ.ಜಾ.ವೇ.ಮುಖಂಡ ಸತ್ಯಜಿತ್ ಸುರತ್ಕಲ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸತ್ಯಜಿತ್ ಸುರತ್ಕಲ್ ಅವರು ಧರ್ಮ , ಸಂಸ್ಕ್ರತಿ ಉಳಿದರೆ ಮಾತ್ರ ಈ ದೇಶ ಸಂಪತ್ಬರಿತವಾಗಿ ಮೆರೆಯಲು ಸಾಧ್ಯ ಎಂದು ಅವರು ಹೇಳಿದರು.
ವಿಭಾಗ ಕಾರ್ಯದರ್ಶಿ ರವಿರಾಜ್ ಬಿ.ಸಿ.ರೋಡು, ಬಂಟ್ವಾಳ ತಾಲೂಕು ಅಧ್ಯಕ್ಷ ಚಂದ್ರ ಕಲಾಯಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ, ವಿಶ್ವಹಿಂದೂ ಪರಿಷತ್ ನ ಪ್ರಧಾನ ಕಾರ್ಯದರ್ಶಿ ಸುರೇಶ್ ಬೆಂಜನಪದವು ವೇದಿಕೆಯಲ್ಲಿದ್ದರು.
ಸಭಾ ಕಾರ್ಯಕ್ರಮ ಕ್ಕೆ ಮುನ್ನ ಪಂಜಿನ ಮೆರವಣಿಗೆ ನಡೆಯಿತು.ಕಿರಣ್ ಶೆಟ್ಟಿ ಸ್ವಾಗತಿಸಿ, ಅಕ್ಷಯ್ ಕಾಮಾಜೆ ವಂದಿಸಿದರು.