ಬಂಟ್ವಾಳ: ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದಿ ಯೋಜನೆ ಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಎಚ್. ಎಲ್ ಮಂಜುನಾಥ ಹಾಗೂ ದ ಕ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಭೇಟಿ ನೀಡಿ ಸಂತ್ರಸ್ತರಿಗೆ ಬೇಕಾದ ಮನೆ ಸಾಮಾಗ್ರಿಗಳನ್ನು ವಿತರಿಸಿದರು. 
ಪ್ರವಾಹದಿಂದ ಕೆಸರು ತುಂಬಿದ ಮನೆಯನ್ನು ತೊಳೆಯಲು ಹಾಗೂ ದಿನ ಬಳಕೆಗೆ ನೀರು ಪೂರೈಕೆ, ಮನೆಯ ವಠಾರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಬ್ಲೀಚಿಂಗ್ ಪೌಡರ್ ಮತ್ತಿತರ ಸೊತ್ತುಗಳನ್ನು ವಿತರಿಸಲಾಯಿತು. ಸಂತ್ರಸ್ತರು ಇರುವ ಗಂಜಿ ಕೇಂದ್ರ ಗಳಿಗೂ ಭೇಟಿ ನೀಡಿದ ಅವರು, ಪಾಣೆಮಂಗಳೂರು, ನಂದಾವರ, ನಾವೂರ, ಬಂಟ್ವಾಳ ಪರಿಸರದ 200 ಕುಟುಂಬಗಳಿಗೆ ,ಗಂಜಿ ಕೇಂದ್ರ ಗಳಿಗೆ ಬೇಕಾದಷ್ಟು ದಿನ ನಿತ್ಯದ ವಸ್ತುಗಳಾದ ಅಕ್ಕಿ ,ತೆಂಗಿನ ಕಾಯಿ, ತರಕಾರಿ ದಿನಸಿ ಸಾಮಾನುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿ.ಸಿ.ರೋಡ್ ವಲಯದ ಅಧ್ಯಕ್ಷರಾದ ಶೇಖರ ಸಾಮಾನಿ, ಜನ ಜಾಗೃತಿ ವೇದಿಕೆಯ ಬಿ.ಸಿ.ರೋಡ್ ವಲಯದ ಅಧ್ಯಕ್ಷರಾದ ರೊನಾಲ್ಡ್ ಡಿಸೋಜಾ , ಬಿಸಿರೋಡ್ ವಲಯದ ಮೇಲ್ವಿಚಾರಕರಾದ ಕೇಶವ ಕೆ ಹಾಗೂ ಬಿ.ಸಿ.ರೋಡ್ ಒಕ್ಕೂಟದ ಸೇವಾ ಪ್ರತಿನಿಧಿ ವನಜಾಕ್ಷಿ ಉಪಸ್ಥಿತರಿದರು.
