ಬಂಟ್ವಾಳ : ಕಳೆದ ನಾಲ್ಕು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ ಕಳವು ,ದರೋಡೆ ಪ್ರಕರಣದ  ಆರೋಪಿತೆಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರುಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ  ಮತ್ತೂರು ಗ್ರಾಮದ ಮಡಿಕೆ ಕಟ್ಟೆ ನಿವಾಸಿ ಆನಂದ ಕೊರಮ ಅವರ  ಪತ್ನಿ ನೇತ್ರಾವತಿ ಅಲಿಯಾಸ್ ನೇತ್ರಮ್ಮ (37)  ಹಾಗೂ ಈಕೆಯ ಜಾಮೀನುದಾರ ಬೆಳಗಾಂ ನಿವಾಸಿ ರಾಜೇ ಸಾಹೇಬ್ ಅಲಿಯಾಸ್ ನದಾಫ್ ಎಂಬವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು  ಬೆಳಗಾವಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.IMG-20190804-WA0093

ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನೇತ್ರಾವತಿವಿರುದ್ದ ಬಂಟ್ವಾಳ ಗ್ರಾಮಾಂತರ ಸಹಿತ  ವಿರುದ್ದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಉಪ್ಪಿನಂಗಡಿ , ಬಂಟ್ವಾಳ ನಗರ   ಬೆಳ್ತಂಗಡಿ, ಪೂಂಜಾಲಕಟ್ಟೆ, ಸುಳ್ಯ , ಗಂಗೊಳ್ಳಿ ಠಾಣೆಯಲ್ಲಿ  ಕಳವು  ಪ್ರಕರಣಗಳು ದಾಖಲಾಗಿರುತ್ತವೆ ಎಂದು ಪೊಲೀಸರುತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *