ಬಂಟ್ವಾಳ ; ತಾಲೂಕಿನ ಬಡಗ ಕಜೆಕಾರುಗ್ರಾಮದ ಪಾಂಡವರಕಲ್ಲು ಎಂಬಲ್ಲಿ ಪಿಕ್ ಅಪ್ ವಾಹನದಲ್ಲಿ ಹೋರಿಯೊಂದನ್ನು ಅಕ್ರಮವಾಗಿ ಸಾಗಿಸುವುದನ್ನು ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಜೆಕಾರು ನಿವಾಸಿ ಕಾಸಿಂ(43) ಎಂಬಾತನನ್ನು ಬಂಧಿಸಿ ಪಿಕಪ್ ಸಹಿತ ಒಂದು ಹೋರಿಯನ್ನು ಪೊಲೀಸರು ವಶಪಡಿಸಿದ್ದಾರೆ.
ಪುಂಜಾಲಕಟ್ಟೆ ಠಾಣೆಯ ಎಸ್ ಐ ಸೌಮ್ಯ ಮತ್ತವರ ಸಿಬಂದಿಗಳು ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಜಂಕ್ಷನ್ನನಲ್ಲಿ ನವಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ ಅನುಮಾನಾಸ್ಪದವಾಗಿ ಚಲಿಸಿಕೊಂಡು ಬರುತ್ತಿದ್ದ ಪಿಕ್ ಅಪ್ ನ್ನು ತಡೆದು ಪರಿಶೀಲಿಸಿದಾಗ ಹೋರಿಯೊಂದನ್ನು ಹಿಂಸಾತ್ಮಕವಾಗಿ ತುಂಬಿಸಿರುವುದು ಪತ್ತೆಯಾಗಿದೆ.ಆರೋಪಿಯನ್ನು ವಶಕ್ಕೆಪಡೆದು ವಿಚಾರಿಸಿದಾಗ ಇದನ್ನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂತು.ತಕ್ಷಣ ಆರೋಪಿಯನ್ನು ಬಂಧಿಸಿ ವಾಹನ ಹಾಗೂ ಹೋರಿಯನ್ನು ವಶಪಡಿಸಿ,ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
