ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಅಲ್ಲಿಪಾದೆ ಕಾರ್ಯಕ್ಷೇತ್ರದ ಬೀಯಪಾದೆ ನೋಣಯ್ಯ ಪೂಜಾರಿಯವರಗದ್ದೆಯಲ್ಲಿ  ಯಾಂತ್ರಿಕೃತ ಭತ್ತ ನಾಟಿಯ ಪ್ರಾತ್ಯಕ್ಷಿಕೆ  ನಡೆಯಿತು.   ತಾಲೂಕು ಯೋಜನಾಧಿಕಾರಿ ಜಯಾನಂದ ಪಿ ಯವರು ಭತ್ತ ನಾಟಿ ಪ್ರಾತ್ಯಕ್ಷಿಕೆ ಚಾಲನೆ ನೀಡಿದರು.ಸಂಪನ್ಮೂಲ ವ್ಯಕ್ತಿಯಾಗಿದ್ದ ಬಂಟ್ವಾಳ ತಾಲೂಕು ಕೃಷಿ ಇಲಾಖೆಯ ಸಹಾಯಕ  ನಿರ್ದೇಶಕರಾದ ನಾರಾಯಣ ಶೆಟ್ಟಿಯವರು ಇಲಾಖೆಯಿಂದ ರೈತರಿಗೆ ಸಿಗುವ ಹಲವು ಸವಲತ್ತು,  ಸಂಪರ್ಕ ಕೇಂದ್ರದಲ್ಲಿಕೃಷಿಕರಿಗೆ ಸಿಗುವ ಸೌಲಭ್ಯ , ಸಹಾಯಧನ, ಯಾಂತ್ರಿಕರಣ ಭತ್ತ ಬೇಸಾಯದ ಬಗ್ಗೆ ಮಾಹಿತಿ ನೀಡಿದರು.IMG-20190729-WA0176

ಕಡಿಮೆಖರ್ಚಿನಲ್ಲಿಆಧಿಕ ಇಳುವರಿ: 

ಕೃಷಿ ಯಂತ್ರೋಪಕರಣ ಬಾಡಿಗೆ ಸೇವಾ ಕೇಂದ್ರಉಡುಪಿ ವಿಭಾಗ ಸಮನ್ವಯಾಧಿಕಾರಿ  ಆಶೋಕ್‌ರವರು ಅತಿಥಿ ಸ್ಥಾನದಿಂದ ಮಾತನಾಡಿ ಯಾಂತ್ರಿಕೃತ ಭತ್ತ ನಾಟಿಯಿಂದ ಕೂಲಿಯಾಳುಗಳಸಮಸ್ಯೆನೀಗಿಸಲಾಗಿದ್ದು,   ಕಡಿಮೆ ಖರ್ಚಿನಲ್ಲಿ ಆಧಿಕ ಇಳಿವರಿ ಪಡೆಯಲು ಸಾಧ್ಯ, ಬಾಡಿಗೆ ಕೇಂದ್ರದಲ್ಲಿ ರೈತರಿಗೆ ಬೇಕಾದ ಯಂತ್ರೋಪಕರಣವನ್ನು ಕಡಿಮೆ ಬಾಡಿಗೆಯಲ್ಲಿ ಒಬ್ಬಯಂತ್ರದ ನಿರ್ವಾಹಕನ ಸಹಿತಒದಗಿಸಲಾಗುವುದುಎಂದರು.  ಕೃಷಿ ಮಾಡದೆಗದ್ದಯನ್ನು ಹಡೀಲು ಬಿಡದಂತೆ ಕರೆ ನೀಡಿದ ಅವರು  ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಚಟುವಟಿಕಯನ್ನು ಮುಂದುವರಿಸುವಂತೆ ಮನವಿ ಮಾಡಿದರು.   ತಿಲಕ್ ಶಾಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.   ಈ ಸಂದರ್ಭ ವಲಯ ಒಕ್ಕೂಟದ ಅಧ್ಯಕ್ಷರುಗಳು, ಬೀಯಪಾದೆ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಗೆಳೆಯರ ಬಳಗದ ಲೋಕೇಶ್, ಸರಪಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಲೀಲಾವತಿ, ಬಂಟ್ವಾಳ ಒಕ್ಕೂಟದ ವಲಯಾಧ್ಯಕ್ಷರಾದ ವಸಂತ ಮೂಲ್ಯ,  ಸಿ,ಎಚ್.ಎಸ್.ಸಿ ಕೇಂದ್ರದ ಮ್ಯಾನೇಜರ್ ಸಂದೇಶ್, ಸೇವಾಪ್ರತಿನಿಧಿಗಳಾದ ಉಷಾ, ವಿಜಯ, ವಸಂತಿಯವರು ಉಪಸ್ಥಿತರಿದ್ದರು. ತಾಲೂಕಿನ ಕೃಷಿ ಮೇಲ್ವಿಚಾರಕರು ಸ್ವಾಗತಿಸಿ, ಬಂಟ್ವಾಳ ವಲಯದ ಮೇಲ್ವಿಚಾರಕಿ  ಆಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕಿನ ನಿಕಟಪೂರ್ವ ಒಕ್ಕೂಟಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ವಂದಿಸಿದರು.

By Suddi9

Leave a Reply

Your email address will not be published. Required fields are marked *