ಬಂಟ್ವಾಳ:ವ್ಯಕ್ತಿಯೊಬ್ಬರು ಹೊಟೇಲ್ನ ಲಾಡ್ಜ್ವೊಂದರಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ.ಸಿ.ರೋಡ್ನಲ್ಲಿ ಮಂಗಳವಾರ ನಡೆದಿದೆ.ಪುತ್ತೂರು ತಾಲೂಕಿನ ನೆಹರೂನಗರದ ಕಾರ್ಜಲ್ ನಿವಾಸಿ ಹೇಮಂತ್ ರಜನಿ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.ಇವರು ನಿನ್ನೆ ಬಿ.ಸಿ.ರೋಡಿನ ಕೃಷ್ಣಿಮಾ ಹೊಟೇಲ್ನ ಲಾಡ್ಜ್ನಲ್ಲಿ ರೂಂ ಮಾಡಿ ತಂಗಿದ್ದರು. ಇಂದು ಬೆಳಿಗ್ಗೆ ಲಾಡ್ಜ್ನ ರೂಂ ಸಿಬ್ಬಂದಿ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೇಮಂತ್ ಅವರು ಅಡಿಕೆ ವ್ಯಾಪಾರಸ್ಥರಾಗಿದ್ದು, ಆರ್ಥಿಕ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
