ಬಂಟ್ವಾಳ : ಜೈನ್ ಮಿಲನ್ ಆಶ್ರಯದಲ್ಲಿ ಜರಗುವ ೧೩ನೇ ವರ್ಷದ “ಆಟಿಡೊರ ತಮ್ಮನದ ಲೇಸ್” ಕಾರ್ಯಕ್ರಮವು ಬಿ .ಸಿ.ರೋಡ್ ನ ಸ್ಪರ್ಶ ಕಲಾ ಮಂದಿರ ದಲ್ಲಿ ಜರಗಿತು. ಮಿಲನ್ ಅಧ್ಯಕ್ಷ ಡಾ.ಸುದೀಪ್ ಕುಮಾರ್  ಅಧ್ಯಕ್ಷತೆ ವಹಿಸಿದ್ದರು.ಇದೇ ವೇಳೆ ಕಾಡಬೆಟ್ಟು ಗ್ರಾಮದಲ್ಲಿ ಕಂಬಳದ ಕೋರಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವ  ರಾಜವರ್ಮ ಅಜ್ರಿ,  ಭೂತಾರಾಧನೆಯಲ್ಲಿ ಪಾರಿ ಹೇಳುವ ಕೆಲಸವನ್ನು ಮಾಡಿಕೊಂಡು ಬರುತ್ತಿರುವ ನಾಲೂರು ಮಾಗಣೆಗುತ್ತು ರತ್ನಾಕರ ಕೊಂಡೆ, ತುಳುನಾಡ ಕಲೆ ಸಂಸ್ಕೃತಿ ಜಾನಪದವನ್ನು ಮೈಗೂಡಿಸಿಕೊಂಡ ಸಂಗಬೆಟ್ಟಿನ ಪ್ರೇಮಮ್ಮ , ಜೈನ ಅಡುಗೆ ತಯಾರಿಸುವ ಪಾಕ ಶಾಸ್ತ್ರ ಪ್ರವೀಣ ಬಾಳ್ತಿಲ ಸನತ್ ಕುಮಾರ್ ರವರನ್ನು ಸನ್ಮಾನಿಸಲಾಯಿತು. KAR_2509
 ವೇದಿಕೆಯಲ್ಲಿ ಭಾರತೀಯ ಜೈನ್ ಮಿಲನ್ ವಲಯ-೮ರ ಅಧ್ಯಕ್ಷ ಕೆ.ಪುಷ್ಪರಾಜ ಜೈನ್ , ಮಾಜಿ ಸಚಿವ ಬಿ.ರಮಾನಾಥ ರೈ  ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರು, ವಲಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಜೈನ್  ಉಪಸ್ಥಿತರಿದ್ದರು.  ವಲಯ-೮ರ ಉಪಾಧ್ಯಕ್ಷ ಸುದರ್ಶನ್ ಜೈನ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ನೆರವೇರಿಸಿದರು. KAR_2517
ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ಸ್ವಾಗತಿಸಿದರು. ಜೈನ್ ಮಿಲನ್ ಕಾರ್ಯದರ್ಶಿ ಸನ್ಮತಿ ಜಯಕೀರ್ತಿ ವಂದಿಸಿದರು. ವಿನಯ ಕುಮಾರ್ ಮತ್ತು ಸುಜಾತಾ ಭರತ್ ಕಣಿಯೂರು ಕಾರ್ಯಕ್ರಮ ನಿರ್ವಹಿಸಿದರು. ಸುಮಾರು ೧೦೫ ಮನೆಗಳಿಂದ ಮನೆಯಲ್ಲಿ ತಯಾರಿಸಿ ತಂದ ಜೈನರ ಪಾರಂಪಾರಿಕ ತಿಂಡಿ ತಿನಿಸುಗಳನ್ನು ಪ್ರದರ್ಶನವಿಟ್ಟು ಸವಿಯಲು ಅವಕಾಶ ಮಾಡಿಕೊಡಲಾಯಿತು.ಇದಕ್ಕು ಮೊದಲು ದಿವಂಗತ ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ರಿಗೆ ಸಂತಾಪ ಸೂಚಿಸಲಾಯಿತು.   ಕೊನೆಗೆ ಮಿಲನ ಸದಸ್ಯರಿಂದ ತುಳುನಾಡ ಜಾನಪದ ವಿವಿಧ ಸಾಂಸ್ಕೃತಿಕ ವೈವಿಧ್ಯ ನಡೆಯಿತು.

By suddi9

Leave a Reply

Your email address will not be published. Required fields are marked *