SSಇ ಮಂಚಿ ಸೆಕ್ಟರ್ ವತಿಯಿಂದ ದಿನಾಂಕ 28-07-2019 ಭಾನುವಾರದಂದು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕುಕ್ಕಾಜೆಯಲ್ಲಿ ಬ್ರಹತ್ ರಕ್ತದಾನ ಶಿಬಿರವು ನಡೆಯಿತು.ಪ್ರಸ್ತುತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ ಅಸ್ಲಂ ಸಂಪಿಲರವರು ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ದುಆಃ ಚಾಲನೆಗೈದು, ಅಬೂಬಕ್ಕರ್ ಲತೀಫಿ ಉಸ್ತಾದ್ ಎಣ್ಮೂರು ಉದ್ಘಾಟನೆಗೈದರು.

WhatsApp Image 2019-07-29 at 11.43.56ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಎಂ.ಎಸ್ ಪ್ರಸನ್ನ ರವರು ರಕ್ತದ ಅನಿವಾರ್ಯತೆ ತುರ್ತಾಗಿ ಕಂಡುಬಂದಾಗ ರಕ್ತದ ಅವಶ್ಯಕತೆಗಾಗಿ ಕಷ್ಟಪಡುವ ಸನ್ನಿವೇಶವು ಈ ಹಿಂದೆ ಇದ್ದು, SSಈ ನಂತಹ ಸಂಘಟನೆಯು ಸಮಯಕ್ಕೆ ಸರಿಯಾಗಿ ಶಿಬಿರಗಳನ್ನು ನಡೆಸುವುದರಿಂದ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಯಶಸ್ವಿಯಾಗಿರುತ್ತದೆ ಎಂದು ಪ್ರಾಸ್ತಾವಿಕ ಮಾತುಗಳನ್ನಾಡಿದರು. SSಈ ಮಂಚಿ ಸೆಕ್ಟರ್ ನಡೆಸುವಂತಹ ರಕ್ತದಾನ ಶಿಬಿರವು ಬಹಳ ಅಚ್ಚುಕಟ್ಟಾಗಿ ನಡೆಸುತ್ತಾ ಬಂದಿರುತ್ತಾರೆ. ಇನ್ನು ಮುಂದೆಯೂ ಶಿಬಿರಗಳನ್ನು ನಡೆಸಿ ಸಮಾಜಕ್ಕೆ ಮಾದರಿಯಾಗಲಿ ಎಂದು ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಝಾಕ್ ಕುಕ್ಕಾಜೆ ಪ್ರಸ್ತಾವನೆಗೈದರು. SSಈ ದ.ಕ ಬ್ಲಡ್ ಸೈಬೋದ ಅಧೀನದಲ್ಲಿ ನಡೆದ ಈ ರಕ್ತದಾನ ಶಿಬಿರದಲ್ಲಿ ಮಂಚಿ ಸೆಕ್ಟರ್ ಒಟ್ಟು 154 ಯುನಿಟ್ ರಕ್ತವನ್ನು ಸಂಗ್ರಹಿಸಿ ಜಿಲ್ಲಾಮಟ್ಟದಲ್ಲಿ ಪ್ರಶಂಸೆಯನ್ನು ಪಡೆದು ಜಿಲ್ಲೆಯಲ್ಲೇ ದಾಖಲೆಯನ್ನು ಬರೆದು ಮೆಚ್ಚುಗೆಯನ್ನು ಪಡೆದಿರುತ್ತದೆ.ವೇದಿಕೆಯಲ್ಲಿ SSಈ ದ.ಕ ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ, ಪ್ರ.ಕಾರ್ಯದರ್ಶಿ ಶರೀಫ್ ನಂದಾವರ, ಕಾರ್ಯದರ್ಶಿ ಜಮಾಲ್ ಸಖಾಫಿ, ಸದಸ್ಯರಾದ ಝೈನುಲ್ ಆಬಿದ್ ನಈಮಿ, SSಈ ಬಂಟ್ವಾಳ ಡಿವಿಶನ್ ಅಧ್ಯಕ್ಷರಾದ ಅಕ್ಬರ್ ಅಲಿ ಮದನಿ, ಎಂ.ಎಸ್ ಮುಹಮ್ಮದ್ , ಅಬ್ಬಾಸ್ ಅಲಿ, ಮಾಧವ ಮಾವೆ, ಅಬ್ದುಲ್ ರಹಿಮಾನ್ ಸಂಪಿಲ, ಕರೀಂ ಕದ್ಕಾರ್, ಅನ್ಸಾರ್ ಕಾರಾಜೆ, ಹಂಝ ಮಂಚಿ, ಜಾಬಿರ್ ಪಡ್ಪು, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೆಕ್ಟರ್ ಪ್ರ.ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ ಸ್ವಾಗತಿಸಿ, ಕಾರ್ಯದರ್ಶಿ ಲುಕುಮಾನ್ ಕುಕ್ಕಾಜೆ ಧನ್ಯವಾದ ನಡೆಸಿ, ಮಂಚಿ ಸೆಕ್ಟರ್ ಬ್ಲಡ್ ಸೈಬೋ ಉಸ್ತುವಾರಿ ಝುಬೈರ್ ಸಂಪಿಲ ನಿರೂಪಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *