ಶ್ರೀ ವೆಂಕಟರಮಣ ಸ್ವಾವಿೂ ಪದವಿ ಕಾಲೇಜು ಬಂಟ್ವಾಳದಲ್ಲಿ ಶೈಕ್ಷಣಿಕ ವರ್ಷ 2019-20ರ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಸದ್ರಿ ಕಾಲೇಜಿನ ರಾಜನೀತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಯುತ ನಾರಾಯಣ ಭಂಡಾರಿಯವರು ‘ಎನ್.ಎಸ್.ಎಸ್ ಒಂದು ಅನುಭವ ಶಿಕ್ಷಣ ವಿಧಾ£’À ಬದುಕಿನಲ್ಲಿ ಶಿಸ್ತು, ಸಂಯಮ, ಸಮಯ ಪಾಲ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಯೋಜನಾ ಕೌಶಲ್ಯ, ಮತ್ತು ಮುಂದಾಳತ್ವ ಕೌಶಲ್ಯ ಮುಂತಾದ ಉಪಯುಕ್ತ ಗುಣಗಳನ್ನು ಮೈಗೂಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಒಂದು ಪ್ರೇರಕ ಶಕ್ತಿ ಎಂದು ತಿಳಿಸಿದರು.

3M4A0691
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್‍ರವರು ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ತಮ್ಮ ವ್ಯಕಿತ್ವವನ್ನು ನಿರೂಪಿಸಿಕೊಳ್ಳಬೇಕೇಂದು ಕಿವಿಮಾತು ಹೇಳಿದರು.
ಎನ್ ಎಸ್ ಎಸ್ ಘಟಕದ ನಾಯಕರಾದ ಶ್ರೀ ಹರ್ಷಿತ್ ಇವರು 2018-19ರ ಶೈಕ್ಷಣಿಕ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯ ಚಟುವಟಿಕೆಗಳ ವರದಿ ವಾಚಿಸುವುದರ ಜೊತೆಗೆ ವರದಿ ವರ್ಷದ ಎನ್.ಎಸ್.ಎಸ್ ಸ್ವಯಂ ಸೇವಕರ ಸಾಧನೆಗಳನ್ನು ತಿಳಿಸಿದರು. ಎನ್.ಎಸ್.ಎಸ್ ಘಟಕದ ನಾಯಕರುಗಳಾದ ಧನುಷ್, ಗೌತಮಿ ಹಾಗೂ ದೀಕ್ಷಾ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯೋಜನಾಧಿಕಾರಿಗಳಾದ ಡಾ| ಮಂಜುನಾಥ ಉಡುಪ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಆಥಿತಿಗಳನ್ನು ಸ್ವಾಗತಿಸಿದರೆ ಇನ್ನೋರ್ವ ಯೋಜನಾಧಿಕಾರಿಗಳಾದ ಶ್ರೀಮತಿ ಶಶಿಕಲಾ ಎಮ್ ಪಿ. ಯವರು ಧನ್ಯವಾದ ಸಮರ್ಪಿಸಿದರು. ಸ್ವಯಂ ಸೇವಕಿ ಕುಮಾರಿ ಸುಶ್ಮಿತಾ ಪೈ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *