ಉಡುಪಿ: ಉಡುಪಿಯ ಆಪತ್ಭಾಂದವ ನಿತ್ಯಾನಂದ ಒಳಕಾಡು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹಳದಿ ಕಾಮಾಲೆ, ಪಿತ್ತಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ತಿಳಿದು ಬಂದಿದೆ. ಮಣಿಪಾಲ ಕೆ.ಎಂ,ಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು, ಅವರ ಆಪ್ತ ತಾರಾನಾಥ್ ಮೇಸ್ತ ಶಿರೂರು ಅವರಿಂದ ತಿಳಿದು ಬಂದಿದೆ.33dc742a-7434-4cc4-be17-25754fb7951d

ನಿತ್ಯಾನಂದ ಒಳಕಾಡು ಅವರ ಅನಾರೋಗ್ಯದ ಕಾರಣದಿಂದ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಸಾರ್ವಜನಿಕರಿಗೆ ನೀಡುವ ಉಚಿತ ಅಂಬಲೇನ್ಸ್ ಸೇವೆಯನ್ನು ಕೆಲವು ದಿನಗಳವರೆಗೆ ತಾತ್ಕಾಲಿಕವಾಗಿ ನಿಲುಗಡೆಗೊಳಿಸಿದೆ. ಸಮಿತಿಯ ಸಹಾಯವಾಣಿಗೆ ತುರ್ತು ಕರೆಗಳು ಬರುತ್ತಿದ್ದು, ಸ್ಪಂದಿಸಲು ಅಸಾಧ್ಯ ಪರಿಸ್ಥಿತಿ ನಿರ್ಮಾಣವಾದರಿಂದ ಸಾರ್ವಜನಿಕರು ಸಹಕರಿಸ ಬೇಕೆಂದು ಸಮಿತಿಯು ವಿನಂತಿಸಿದೆ.

By suddi9

Leave a Reply

Your email address will not be published. Required fields are marked *