ಬಂಟ್ವಾಳ : ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಇವರ ವತಿಯಿಂದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಅಭಿವೃದ್ಧಿ ಗಾಗಿ ಅಧಿಕೃತ ನಂದಿನಿ ಡೀಲರ್ ಗಳ ಸಮಾಲೋಚನಾ ಸಭೆ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ರವಿರಾಜ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜುಲೈ 27 ರಂದು ಮಧ್ಯಾಹ್ನ ನಡೆಯಿತು. ನಂದಿನಿ ಡೀಲರ್ ಗಳು ಗುಣಮಟ್ಟವನ್ನು ಕಾಯ್ದುಕೊಂಡು ಗ್ರಾಹಕರಿಗೆ ಬೇಡಿಕೆಗಳಿಗೆ ಅನುಗುಣವಾಗಿ ಕ್ಲಪ್ತ ಸಮಯದಲ್ಲಿ ಉತ್ತಮ ಸೇವೆ ನೀಡಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ತಿಳಿಸಿದರು.
ನಂದಿನಿ ಉತ್ಪನ್ನ ಗಳು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಹಾಗೂ ಮೂಲಕ ಜನಪ್ರಿಯ ತೆ ಪಡೆದಿದೆ ಎಂದು ಅವರು ಹೇಳಿದರು. ನಂದಿನಿ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಡೀಲರುಗಳು ಮಾಹಿತಿ ನೀಡಬೇಕಾಗಿದೆ.ಸಾಮಾಜಿಕ ಸೇವೆ ಎಂಬ ದೃಷ್ಟಿಯಿಂದ ಡೀಲರುಗಳ ನಿಮ್ಮ ಸೇವೆ ಬೇಕಾಗಿದೆ ಎಂದು ಹೇಳಿದರು.
ಅತ್ಯಧಿಕ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಿದ ಐದು ಮಂದಿ ಡೀಲರುಗಳನ್ನು ಆಧ್ಯಕ್ಷರು ಒಕ್ಕೂಟದ ವತಿಯಿಂದ ವಿಶೇಷ ಗೌರವ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕ ರುಗಳಾದ ಸುಚರಿತ ಶೆಟ್ಟಿ, ಸವಿತಾ ಶೆಟ್ಟಿ, ಸುಧಾಕರ ರೈ, ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಜಯದೇವಪ್ಬ ಉಪಸ್ಥಿತರಿದ್ದರು. ಮಾರುಕಟ್ಟೆ ಅಧಿಕಾರಿ ಚೇತನ್ ಕುಮಾರ್ ಸ್ವಾಗತಿಸಿ, ಮಾರುಕಟ್ಟೆ ಅಧೀಕ್ಷಕ ರವಿ ಕುಮಾರ್ ವಂದಿಸಿದರು.

