ತೆಂಕಬೆಳ್ಳೂರು : ನಾವು ಚಿಕ್ಕವರಿರುವಾಗ ಮಳೆಗಾಲ ಬಂತೆಂದರೆ ಸಾಕು ಮನೆಯವರ ಕಣ್ತಪ್ಪಿಸಿ ನೀರಿನಲ್ಲಿ ಆಡಲು ಗೆಳೆಯರೊಂದಿಗೆ ಸೇರಿ ಹೋಗುತ್ತಿದ್ದೆವು ಅಲ್ಲಿ ಎಲ್ಲಿಯಾದರು ಕೆರೆ ಕಂಡರೆ ಸಾಕು ಅದಕ್ಕೆ ದುಮುಕಿ ಈಜಲು ಸುರು ಮಾಡುತ್ತಿದ್ದೆವು. ಮನೆಯಿಂದ ನಾಗರಬೆತ್ತ ಹಿಡಿದು ಬಂದಾಗಲೇ ಮನೆಯ ನೆನಪಾಗಿ ಮನೆಯ ಕಡೆ ಓಡುತ್ತಿದ್ದೆವು ಗಾಳ ಹಾಕಿ ಮೀನು ಹಿಡಿಯಲು , ಬಲೆ ಹಿಡಿದುಕೊಂಡು ಕೆರೆಗೆ ಮೀನು ಹಿಡಿಯಲು ಹೋಗುವ ನೆನಪು ಸದಾ ನನ್ನನ್ನು ನೆನಪಿಸುತ್ತಿತ್ತು . ಸುಮಾರು ಇಪ್ಪತ್ಯೆದು ವರ್ಷಗಳ ಹಿಂದಿನ ನೆನಪು ನನ್ನ ಬಾಲ್ಯದ ನೆನಪು ನನ್ನ ಕಣ್ಣೆದುರಿಗೆ ಬಂದು ನಿಂತಿತು ಅಂದು ಭಾನುವಾರ ರಜೆಯಲ್ಲಿ ನಾನು ಮನೆಯಲ್ಲಿಯೆ ಇದ್ದೆ ನಾನು ನಮ್ಮ ಹಳ್ಳಿಯ ಕಡೆಗೆ ಗೆಳೆಯನೊಂದಿಗೆ ಹೋಗುವಾಗ ತೋಡಿನಲ್ಲಿ ಮಕ್ಕಳು ಮೀನು ಹಿಡಿಯುವುದನ್ನು ನೋಡಿದಾಗ ಕೂಡಲೇನನ್ನ ಕ್ಮಾಮರಾದಲ್ಲಿ ಸೆರೆ ಹಿಡಿಯುವ ತವಕ ಸುರು ಆಯಿತು . ನಾನು ಕೂಡಲೇ ಮೀನು ಹಿಡಿಯುವ ಮಕ್ಕಳ ಫೋಟೋ ತೆಗೆದಾಗ ನನ್ನನ್ನೆ ನೋಡಿ ಮಕ್ಕಳು ಖುಷಿ ಪಟ್ಟರು ತೆಂಕಬೆಳ್ಳೂರು ಕಮ್ಮಾಜೆಯ ಪರಿಸರದಲ್ಲಿ ಮಕ್ಕಳು ನೀರಿನಲ್ಲಿ ಮೀನು ಇಡಿಯುತಿರುವುದು.
ಇದು ತಿರುಮಲೇಶ್ ಬೆಳ್ಳೂರು ಅವರು ತನ್ನ ಕ್ಯಾಮರದಲ್ಲಿ ಸೆರೆಹಿಡಿದ ಪೂಟೊ.


