ಬಂಟ್ವಾಳ:ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಪಂತ ಗ್ರಾಮದ ನೋವುಂಡ ಸರಕಾರಿ ಅರಣ್ಯ ಪ್ರದೇಶದ ಪಂಜಿ ಕುಡೇಲು ಎಂಬಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಪುಂಜಾಲಕಟ್ಟೆ ಪೊಲೀಸರು ದಾಳಿನಡೆಸಿ ಉಲಾಯಿ ಪಿದಾಯಿ ಆಟದಲ್ಲಿ ನಿರತರಾಗಿದ್ದ 7 ಮಂದಿಯನ್ನು ಬಂಧಿಸಿದ್ದಾರೆ.  ಸ್ಥಳೀಯರಾದ ದಿಲೀಪ್,ಹರೀಶ್ ,ಇಕ್ಬಾಲ್,ಲತೀಫ್ ,ಶೇಖರ್ ,ಸತೀಶ್ ,ಶೇಖರ ಆಚಾರಿ ಬಂಧಿತರಾಗಿದ್ದಾರೆ.  ಖಚಿತ ವರ್ತಮಾನದ ಮೇರೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐ ಸೌಮ್ಯ ಜೆ ಮತ್ತವರ ಸಿಬಂದಿಗಳು ಈ ದಾಳಿ ಕಾರ್ಯಾಚರಣೆ ನಡೆಸಿ ಬಂದಿತರಿಂದ ಇಸ್ಪೀಟು ಎಲೆಗಳು,ಆಟಕ್ಕೆ ಪಣವಾಗಿಟ್ಟಿದ್ದ  1320 ರೂ.ನಗದು,  ಇಸ್ಪೀಟ್ ಎಲೆಗಳು,  ಟರ್ಫ್ ಲ್,2 ಮೋಟಾರ್ ಸೈಕಲ್  ಹಾಗೂ 1ಆಟೋರಿಕ್ಷಾವನ್ನು ವಶ  ಪಡೆಸಿಕೊಂಡಿದ್ದಾರೆ.ಇದರ ಒಟ್ಟು  ಮೌಲ್ಯ :-1,53,37೦ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಪುಂಜಾಲಕಟ್ಟೆ  ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.

By suddi9

Leave a Reply

Your email address will not be published. Required fields are marked *