ಬಂಟ್ವಾಳ: ಬಂಟ್ವಾಳತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿ ಮತ್ತು ಇಲ್ಲಿನ ಕೆಲವು ಸಿಬಂದಿಗಳ ದುವರ್ತನೆ ಮತ್ತು ಲಂಚಾವತಾರ ವಿರುದ್ಧ ಇದೇ 25ರಂದು ಪ್ರತಿಭಟನೆ ನಡೆಸಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಹೇಳಿದ್ದಾರೆ.
ಪುಂಜಾಲಕಟ್ಟೆಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಮುಖರಾದ ಆನಂದ ಕುಲಾಲ್ ಎಡ್ತೂರು, ಶಂಕರ ಶೆಟ್ಟಿ ಬೆದ್ರಮಾರು, ಸೀತಾರಾಮ ಶೆಟ್ಟಿ ಸೇವಾ, ಯೋಗೀಶ್ ಆಚಾರ್ಯ ಕುಕ್ಕಿಪ್ಪಾಡಿ, ಕೆ.ಹರಿಶ್ಚಂದ್ರ ಪೂಜಾರಿ ಕಜೆಕಾರು, ಲಕ್ಷ್ಮಿನಾರಾಯಣ ಹೆಗ್ಡೆ , ವಿಶ್ವನಾಥ ಪೂಜಾರಿ ಮಡಂತ್ಯಾರು, ಅರವಿಂದ ಜೈನ್ ಮಡಂತ್ಯಾರು ಮತ್ತಿತರರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *