ಉಡುಪಿ,: ನಗರದ ಕವಿ ಮುದ್ದಣ ಮಾರ್ಗ, ಇಲ್ಲಿಯ ಶ್ರೀಜಗದ್ಗುರು ನಿತ್ಯಾನಂದ ಮಂದಿರ- ಮಠದಲ್ಲಿ ಆಷಾಡ ಏಕಾದಶಿಯ ಪ್ರಯುಕ್ತ ‘ಶ್ರೀವಿಠಲ ದೇವರ ಆರಾಧನೆ’ ಕಾರ್ಯಕ್ರಮವು ಮಂದಿರ ಮಠದ ಕಾರ್ಯದರ್ಶಿ ಪಾಂಗಳ ಯೊಗೀಶ್ ಶಾನಭಾಗ್ ಅವರಿಂದ ಸೇವಾ ರೂಪದಲ್ಲಿ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕರಾದ ಆರೂರು ಕೃಷ್ಣಮೂರ್ತಿ ಭಟ್ ಅವರಿಂದ ಪೂಜಾಕೈಂಕರ್ಯಗಳು ನಡೆದವು.
20190713_201733
ಶ್ರೀನಿತ್ಯಾನಂದ ಭಜನಾ ಮಂಡಳಿಯ ಭಜಕರಿಂದ ಶ್ರೀವಿಠಲನಾಮ ಸಂಕೀರ್ತನೆ, ಭಜಕರಿಗೆ ಗೌರಾವರ್ಪಣೆ, ಭಕ್ತರಿಗೆ ಪ್ರಸಾದ ವಿತರಣೆ ಮೊದಲಾದ ಧಾರ್ಮಿಕ ಪ್ರಕ್ರಿಯೆಗಳು ನಡೆಯಿತು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ, ಶ್ರೀವಿಠಲ ಆರಾಧನೆ ಸೇವಾಕರ್ತರಿಂದ, ಧಾರ್ಮಿಕ ಸೇವಾ ಕಾರ್ಯದಲ್ಲಿ ನಿರಂತರ ನಿರತರಾಗಿರುವ ಕೊಡವೂರು ಶ್ರೀಸಾಯಿಬಾಬಾ ಮಂದಿರದ ಧರ್ಮದರ್ಶಿಗಳಾಗಿರುವ ತೋಟದ ಮನೆ ಕೆ. ದಿವಾಕರ್ ಶೆಟ್ಟಿ ಅವರನ್ನು ಶ್ರೀವಿಠಲ ರುಖುಮಾಯಿ ಪುತ್ಥಳಿ, ವಿಶೇಷ ಪ್ರಸಾದ ನೀಡಿ ಗೌರವ ಸಮರ್ಪಿಸಲಾಯಿತು.20190713_191452

ಕಾರ್ಯಕ್ರಮದಲ್ಲಿ ಮಂದಿರ-ಮಠದ ಅಧ್ಯಕ್ಷರಾದ ಎರ್ಮಾಳ್ ಶಶಿಧರ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಕಲ್ಸಂಕ ದೇವದಾಸ್ ಪೈ, ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾದ ಭೋಜರಾಜ್ ಆರ್ ಕಿದಿಯೂರ್, ಮಂದಿರ- ಮಠದ ಕೋಶಾಧಿಕಾರಿ ಬನ್ನಂಜೆ ಉದಯ ಕುಮಾರ್ ಶೆಟ್ಟಿ ಹಾಗೂ ಮಂದಿರ ಮಠದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪಾಂಗಳ ಯೊಗೀಶ್ ಶಾನಾಭಾಗ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *