ಬಂಟ್ವಾಳ:ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಎಸ್ಎಫ್)ನ ಬೆಳ್ಳಿಹಬ್ಬ ಪ್ರಯುಕ್ತ ಅ.25ರಿಂದ ನ.2ರತನಕ ನಡೆಯಲಿರುವ ಕನರ್ಾಟಕ ಯಾತ್ರೆ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಆಕರ್ಷಕ ಸಂದೇಶ ರ್ಯಾಲಿ ನಡೆಯಿತು.
21btl-3
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ನೇತೃತ್ವದಲ್ಲಿ ನಡೆಯುವ ಕನರ್ಾಟಕ ಯಾತ್ರೆ ಮತ್ತು ಸೆ.19 ರ ಎಸ್ಸೆಸ್ಸೆಫ್ನ ಧ್ವಜ ದಿನಾಚರಣೆ ಪ್ರಯುಕ್ತ ಈ ರ್ಯಾಲಿ ಏರ್ಪಡಿಸಲಾಗಿದೆ ಎಂದು ರ್ಯಾಲಿಗೆ ಚಾಲನೆ ನೀಡಿದ ಜಿಲ್ಲಾ ಸದಸ್ಯ ಎ.ಕೆ.ಅಬ್ದುಲ್ಲಾ ಕೊಳಕೆ ಮತ್ತು ವಿಭಾಗೀಯ ಕೋಶಾಧಿಕಾರಿ ಅಬ್ದುಸ್ಸಲಾಂ ಸಅದಿ ಗುಡ್ಡೆಅಂಗಡಿ ಇವರು ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಮಾತನಾಡಿ, ಮಸೀದಿ ಮತ್ತು ಮದ್ರಸಾಗಳು ಎಂದಿಗೂ ಭಯೋತ್ಪಾದನೆ ಕೇಂದ್ರಗಳಾಗದೆ ಸಮಾಜಕ್ಕೆ ಒಳಿತನ್ನು ಬೋಧಿಸಿ, ಕೆಡುಕು ನಿವಾರಿಸಲು ಶ್ರಮಿಸುತ್ತಿದೆ ಎಂದರು. ವಿಭಾಗೀಯ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಅಧ್ಯಕ್ಷತೆ ಸಭಾ ಕಾರ್ಯಕ್ರಮದ ವಹಿಸಿದ್ದರು. ಜಿಲ್ಲಾ ಕಾರ್ಯದಶರ್ಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಪಾಣೆಮಂಗಳೂರು ಸೆಕ್ಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಸಖಾಫಿ ರೆಂಗೇಲು, ಕಲ್ಲಡ್ಕ ಸೆಕ್ಟರ್ ಅಧ್ಯಕ್ಷ ಎಂ.ಸಿದ್ದೀಕ್ ಸಅದಿ ಎನ್.ಸಿ.ರೋಡ್, ಮಂಚಿ ಸೆಕ್ಟರ್ ಅಧ್ಯಕ್ಷ ಓ.ಒ.ಹನೀಫ್ ಮದನಿ ನೂಜಿ, ಯಸ್ಟೀಂ ಅಮೀರ್ಗಳಾದ ಮುಹಮ್ಮದ್ ಶೆರೀಫ್ ಮದನಿ ಮಾವಿನಕಟ್ಟೆ, ಅಕ್ಬರ್ ಅಲಿ ಮದನಿ ಆಲಾಡಿ, ಇಸ್ಮಾಯಿಲ್ ಸಅದಿ ಮೋಂತಿಮಾರ್, ಮುಹಮ್ಮದ್ ಅಲಿ ಮದನಿ ಸೆರ್ಕಳ ಮತ್ತಿತರರು ಇದ್ದರು.
ವಿಭಾಗೀಯ ಪ್ರಧಾನ ಕಾರ್ಯದಶರ್ಿ ಮುಹಮ್ಮದ್ ಶೆರೀಫ್ ನಂದಾವರ ಸ್ವಾಗತಿಸಿ, ವಂದಿಸಿದರು.

By suddi9

Leave a Reply

Your email address will not be published. Required fields are marked *