ಬಂಟ್ವಾಳ:ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ರೂಪಿಸಲು ಹಾಗೂ ಮತದಾನದ ಕುರಿತು ಜಾಗೃತಿಯನ್ನು ಮೂಡಿಸಲು ವಿದ್ಯಾಸಂಸ್ಥೆಯಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆಯು ಸಹಕಾರಿಯಾಗಿದೆ ಎಂದು ವಿದ್ಯಾಭಾರತಿಯ ಪ್ರಾಂತ ಸಾರೀರಿಕ ಪ್ರಮುಖ್ ಆನಂದ ಶೆಟ್ಟಿ ಹೇಳಿದರು.

ಕಲ್ಲಡ್ಕ ಶ್ರಿರಾಮ ಪದವಿಪೂರ್ವ ಕಾಲೇಜಿನ ೨೦೧೯-೨೦ನೇ ಸಾಲಿನ ವಿದ್ಯಾರ್ಥಿ ಸಂಘ ಮತ್ತು ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಅವರು ವಿದ್ಯಾರ್ಥಿಗಳಿಗೆ ಕರ್ತವ್ಯವೂ ಒಂದು ಹಕ್ಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ವಸಂತ ಬಲ್ಲಾಳ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಕರುಣಾಕರ್ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ಜಯಲಕ್ಷ್ಮೀ ಕೆ ಸ್ವಾಗತಿಸಿದರು. ವಸುಂಧರಾಲಕ್ಷ್ಮೀ. ಬಿ ವಂದಿಸಿದರು. ಚೈತನ್ಯಾ ಕಾರ್‍ಯಕ್ರಮವನ್ನು ನಿರೂಪಿಸಿದರು.
