ಕೈಕಂಬ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈಕಂಬಕ್ಕೆ ಹತ್ತಿರದ ವಿಕಾಸನಗರದ ಎರಡು ಕಡೆ ಶನಿವಾರ ರಸ್ತೆ ಕಾಂಕ್ರೀಟೀಕರಣ ಹಾಗೂ ಮೋರಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಯಿತು.
ಜಿಪಂ ಸದಸ್ಯ ಯುಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ ಹಾಗೂ ಪಂಚಾಯತ್ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕೈಕಂಬ ರೋಸಾ ಮಿಸ್ತಿಕಾ ಕಾನ್ವೆಂಟ್ಗೆ ಸಮೀಪದ ವಿಕಾಸನಗರದಲ್ಲಿ, ರಾಷ್ಟೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮುಖ್ಯ ರಸ್ತೆಯಲ್ಲಿ ಸುಮಾರು 100 ಮೀಟರ್ ಉದ್ದಕ್ಕೆ ಐದು ಲಕ್ಷ ರೂ ಪಂಚಾಯತ್ ಅನುದಾನದಲ್ಲಿ ಕಾಂಕ್ರೀಟೀಕರಣ ಹಾಗೂ ಮೋರಿ ನಿಮಾಣಗೊಳ್ಳಲಿದೆ.ಗುದ್ದಲಿ ಪೂಜೆ ಸಂದರ್ಭದಲ್ಲಿ ಸ್ಥಳೀಯ ವಾರ್ಡು ಸದಸ್ಯರಾದ ದಾವೂದ್, ಗ್ಲಾಡಿಸ್ ಕ್ವಾಡ್ರಸ್, ಉಮೈ ಭಾನು ಹಾಗೂ ಸೂರ್ಯನಾರಾಯಣ ಮಯ್ಯ, ರೋಮನ್ಸ್ ಲೋಬೊ, ಟ್ರೆಸ್ಟೀ ಮಿನೆಜಸ್, ತಾರಾ ಆಳ್ವ, ಸುಮಾ ಶೆಟ್ಟಿ, ಬೂಬ, ರೈಫಲ್ ಹಮ್ಮಬ್ಬ, ಗುತ್ತಿಗೆದಾರ ಹನೀಫ್ ಮೊದಲಾದವರಿದ್ದರು.



