ಅಜೆಕಾರು: ತಂದೆ ತಾಯಿಯರು ಮತ್ತು ಶಿಕ್ಷಣ ವ್ಯವಸ್ಥೆ ಮಕ್ಕಳು ಸ್ವತಂತ್ರ ವ್ಯಕ್ತಿತ್ವವನ್ನು ರೂಪಿಸಿಕೊಂಡು ಬೆಳೆಯಲು ಪೂರಕವಾಗ ಬೇಕು ಎಂದು ಖ್ಯಾತ ಸಮಾಜ ಸೇವಕ, ವೈದ್ಯ ಡಾ.ಸಂತೋಷ ಕುಮಾರ್ ಶೆಟ್ಟಿ ಹೇಳಿದರು. ಅವರು ಖ್ಯಾತ ಬಾಲ ಕಲಾವಿದೆ ಮೂರು ನೃತ್ಯ ವಿಶ್ವ ದಾಖಲೆಗಳ ಸಾಧಕಿ ಬಾಲ ಕಲಾವಿದೆ ರೆಮೊನಾ ಅವರ ಶಾಲೆಗಳಲ್ಲಿ ಸರಣಿ ಕಾರ್ಯಕ್ರಮ  ರೆಮನಾ ಕಲಾಯಾನ ವನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಶೇಖರ ಅಜೆಕಾರು ಅವರೊಂದಿಗೆ ಜಂಟಿಯಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.

_MG_8446
೧೧೧ರ ಸಂಭ್ರಮದಲ್ಲಿರುವ ಅಜೆಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲಿ ನಡೆದ ಕಾರ್ಯಕ್ರಮದಲ್ಲಿ ರೆಮನಾ ಅವರ ನೃತ್ಯ ಕಾರ್ಯಕ್ರಮ ನಡೆಯಿತು. ರೆಮೋನಾ ಅವರನ್ನು ಸನ್ಮಾನಿಸಿ ಗಣ್ಯರು ಶುಭ ಯಾನಕ್ಕೆ ಹಾರೈಸಿದರು.

_MG_8521
ಮಾತೃ ಭಾಷೆ, ಪ್ರಾಂತ್ಯ ಭಾಷೆ, ದೇಶ ಭಾಷೆ, ಜಾಗತಿಕ ಭಾಷೆ ಎಲ್ಲವೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಾಗಿದೆ. ಅವುಗಳನ್ನು ಮಕ್ಕಳ ಮೇಲೆ ಹೇರದೆ ಹಂತ ಹಂತವಾಗಿ ಕಲಿಸಿದರೆ ಪರಿಣಾಮಕಾರಿಯಾಗುತ್ತದೆ ಎಂದು ಅಧ್ಯಕ್ಷತೆ ವಹಿಸಿದ್ದ ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ನರಸಿಂಹ ಬೊಮ್ಮರಬೆಟ್ಟು ಅಭಿಪ್ರಾಯ ಪಟ್ಟರು.

_MG_8513ಹಿರಿಯ ಪತ್ರಕರ್ತ ಶೇಖರ ಅಜೆಕಾರು ಅವರು ಪ್ರಸ್ತಾವಿಕವಾಗಿ ಮಾತನಾಡಿ ತನ್ನ ಮಗಳ ನೃತ್ಯ ಇತರ ಮಕ್ಕಳಿಗೆ ಪ್ರೇರಣೆಯಾಗುವುದಾದರೆ ಆಗಲಿ ಎಂಬ ಉದ್ದೇಶದಿಂದ ಅವರ ತಾಯಿ ಗ್ಲಾಡಿಸ್ ಈ ಸರಣಿ ಕಾರ್ಯಕ್ರಮಗಳನ್ನು ಸ್ವಯಂ ಪ್ರೇರಣೆಯಿಂದ ನಡೆಸುತ್ತಿದ್ದು ಸರಕಾರಿ ಶಾಲೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಈ ಕಾರ್ಯಕ್ರಮಗಳನ್ನು ನಡೆಸಲು ಒಪ್ಪಿದ್ದಾರೆ. ಅಜೆಕಾರು ಶಾಲೆಗೆ ಅಗತ್ಯವಿದ್ದ ಬೆಳಕಿನ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.

_MG_8514
ರೆಮೊನಾ ಕಲಾಯಾನ ೧ ರ ಆಹ್ವಾನಿತ ಕಲಾವಿದೆ ಮೈಸೂರಿನ ನಾಲ್ಕನೇ ತರಗತಿಯ ಅನನ್ಯ ವಿ.ಎಸ್ ಮೈಸೂರು ಅವರು ಬಡಗು ತಿಟ್ಟಿನ ಯಕ್ಷಗಾನ ನೃತ್ಯ ಪ್ರದರ್ಶನ ನೀಡಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಜಯರಾಮ ಆಚಾರ್ಯ, ಕಲಾವಿದೆ ಗ್ಲಾಡಿಸ್ ಪಿರೇರಾ ಮಂಗಳೂರು, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಅಜೆಕಾರು, ಸದಸ್ಯೆ ಶಶಿಕಲಾ ಹೋಮಲ್ಕೆ ಮೊದಲಾದವರು ಉಪಸ್ಥಿತರಿದ್ದರು. ಸುನಿಧಿ ಮತ್ತು ಸುನಿಜ ಪ್ರಾರ್ಥಿಸಿದರು.
ಮುಖ್ಯೋಪಾಧ್ಯಾಯ ವಿಶ್ವನಾಥ ಅವರು ಸ್ವಾಗತಿಸಿದರು. ದೈಹಿಕ ಶಿಕ್ಷಕ  ಪಾಂಡುರಂಗ ಆಚಾರ್ಯ ಅವರು ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಸಮೀಕ್ಷಾ ಬನಾನ್ ಬೈರೊಟ್ಟು ಕಾರ್ಯಕ್ರಮ ನಿರೂಪಿಸಿದರು. ಶಾಲಾಭಿವೃದ್ಧಿ ಸಮಿತಿ ಎಲ್ಲಾ ಸದಸ್ಯರನ್ನು ಶಿಕ್ಷಕರನ್ನು, ಅದೃಷ್ಟಶಾಲಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

 

By suddi9

Leave a Reply

Your email address will not be published. Required fields are marked *