ಬಂಟ್ವಾಳ, : ಪುರಸಭೆಯ ಅಧಿಕಾರ ಹಸ್ತಾಂತರ ವಿಳಂಬದ ಬಗ್ಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬುಧವಾರ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

3 Btl SDPI
ಬಂಟ್ವಾಳ ಪುರಸಭೆಯ ಚುನಾವಣೆ ನಡೆದು ಸುಮಾರು 10 ತಿಂಗಳು ಕಳೆದರೂ ಚುನಣಾಯಿತ ಸದಸ್ಯರ ಅಧಿಕಾರ ಸ್ವೀಕಾರ ಮತ್ತು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕಾ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಇದರಿಂದ ಪುರಸಭಾ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಕ್ಕೆ ತೊಡಕು ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೆಲವು ರಾಜಕೀಯ ಪಕ್ಷದ ಪ್ರತಿನಿಧಿಗಳು ಮೀಸಲಾತಿ ಬಗ್ಗೆ ನ್ಯಾಯಾಲದಲ್ಲಿ ತಕರಾರು ಎತ್ತಿದ್ದು, ಈ ಕಾರಣದಿಂದಾಗಿ ಅಧಿಕಾರ ಹಸ್ತಾಂತರ ವಿಳಂಬವಾಗುತ್ತಿದೆ. ಆದುದರಿಂದ ಈ ಸಂಬಂಧ ಬಾಕಿ ಇರುವ ದಾವೆಗಳನ್ನು ತ್ವರಿತ ನ್ಯಾಯಾಲಯಗಳಲ್ಲಿ ವಿಲೇವಾರಿ ನಡೆಸುವಂತೆ ರಾಜ್ಯಪಾಲರ ಮೂಲಕ ವಿನಂತಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷ ಯೂಸುಫ್ ಆಲಡ್ಕ, ಕಾರ್ಯದರ್ಶಿ ಇಸ್ಮಾಯಿಲ್ ಭಾವ, ಪುರಸಭಾ ಸದಸ್ಯರಾದ ಮುನಿಷ್ ಅಲಿ, ಇದ್ರಿಸ್ ಪಿಜೆ, ಕ್ಷೇತ್ರ ಸಮಿತಿಯ ಸದಸ್ಯರಾದ ಮಜೀದ್ ಆಲಡ್ಕ, ಇಸಾಕ್ ತಲಪಾಡಿ ಹಾಜರಿದ್ದರು.

By suddi9

Leave a Reply

Your email address will not be published. Required fields are marked *