ವಿಟ್ಲ :ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2019ನೇ ಸಾಲಿನಲ್ಲಿ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಇವುಗಳಲ್ಲಿ ವಿಫಲವಾದ ಕೊಳೆವೆ ಬಾವಿಗಳನ್ನು ಮುಚ್ಚದೆ ಅಪಾಯದ ಸ್ಥಿತಿಯಲ್ಲಿಯೆ ಬಿಟ್ಟು ಹೋಗಿರುತ್ತಾರೆ. ಈ ಚಿತ್ರದಲ್ಲಿರುವ ಕೊಳವೆ ಬಾವಿಯು ಉಕ್ಕುಡ ಕಲ್ಲುಟ್ಟಿಯಡ್ಕದ ಸಾರ್ವಜನಿಕ ಬಾವಿಯ ಹತ್ತಿರವಿದೆ. ಈ ಬಾವಿಯು ಮಕ್ಕಳು ಓಡಾಡುವ ಜಾಗದಲ್ಲೆ ಇದೆ. ಸ್ಥಳೀಯರೊಬ್ಬರು ಈ ಬಾವಿಯನ್ನು ತಾಕ್ಕಾಲಿಕವಾಗಿ ಗಿಡ ನೆಟ್ಟು ಮುಚ್ಚಿರುತ್ತಾರೆ.
ಉಳಿದ ವಿಫಲವಾದ ಬಾವಿಗಳನ್ನು ಪಂಚಾಯತ್ ನವರು ಯಾವುದೇ ಅವಘಡ ಸಂಭವಿಸುವ ಮೊದಲು ಮುಚ್ಚುತಾರೆಯೆ?
