ಬಂಟ್ವಾಳ:ರಾಜ್ಯದಲ್ಲಿ ಪ್ರಸಕ್ತ ಶೇ.10ರಷ್ಟು ಕಾಡಿನ ಪ್ರಮಾಣ ಕಡಿಮೆಯಿದ್ದು, ಅಗತ್ಯವಿರುವ ಎಲ್ಲೆಡೆ ಹೆಚ್ಚು ಹೆಚ್ಚು ಮರ ಗಿಡಗಳನ್ನು ಬೆಳೆಸುವ ಮೂಲಕ ಗರಿಷ್ಟ ಪ್ರಮಾಣದಲ್ಲಿ ಮಳೆ ಮತ್ತು ರೈತರಿಂದ ಸಮೃದ್ಧ ಬೆಳೆ ಕಾಣಲು ಸಾಧ್ಯವಾಗುತ್ತದೆ ಎಂದು ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುರೇಶ್ ಹೇಳಿದ್ದಾರೆ.ಇಲ್ಲಿನ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ವನ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.29btl-Gida
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸಿಲ್ವೆಸ್ಟರ್ ಮಿರಾಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧರ್ಮಗುರು ಆಂಟನಿ ಲಸ್ರಾದೊ ಮಾತನಾಡಿ, ಕಾಡು ಬೆಳೆಸುವುದರ ಜೊತೆಗೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.ಮಂಗಳೂರು ತೋಟಗಾರಿಕಾ ಇಲಾಖೆ ಸಹಾಯಕ ನಿದರ್ೇಶಕ ಪ್ರದೀಪ್ ಡಿಸೋಜ ಮಾತನಾಡಿ, ಹೊಸ ಗಿಡ ನೆಡುವಷ್ಟೇ ಹಳೆ ಗಿಡ ಉಳಿಸಿ ಬೆಳೆಸುವುದೂ ಅಗತ್ಯವಿದೆ ಎಂದರು. ಇದೇ ವೇಳೆ ಹಣ್ಣಿನ ಗಿಡಗಳಿಗೆ ಕಸಿ ಕಟ್ಟುವ ವಿಧಾನ ಬಗ್ಗೆ ಅವರು ಪ್ರಾತ್ಯಕ್ಷಿಕೆ ನೀಡಿದರು. ಸಸ್ಯ ಶಾಮಲ ದಿನೇಶ ನಾಯಕ್ ವಿಟ್ಲ ಮತ್ತು ಉರಗ ಪ್ರೇಮಿ ಸ್ನೇಕ್ ಕಿರಣ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಕೆಥೋಲಿಕ್ ಸಭಾ ಘಟಕ ಅಧ್ಯಕ್ಷ ಪ್ರಕಾಶ್ ಸಲ್ಡಾನ್ಹ ರಾಯಿ, ಪಾಲನಾ ಮಂಡಳಿ ಉಪಾಧ್ಯಕ್ಷ ಕ್ಸೇವಿಯರ್ ಡಿಸೋಜ, ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ದಿವ್ಯಾ ಜ್ಯೋತಿ ಡಿಸೋಜ, ಕನ್ನಡ ಮಾಧ್ಯಮ ಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ವಿನ್ನಿ ಮತ್ತಿತರರು ಇದ್ದರು.
ಸೈಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆ ಜೊತೆಗೆ ಕೆಥೋಲಿಕ್ ಸಭಾ ಮತ್ತು ಸೈಂಟ್ ಪ್ಯಾಟ್ರಿಕ್ ಚಚರ್ಿನ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.ಸಿಸ್ಟರ್ ರೇಶ್ಮಾ ಸ್ವಾಗತಿಸಿ, ಶಿಕ್ಷಕಿಯರಾದ ಸೌಮ್ಯಾ ವಂದಿಸಿದರು. ರಿಮಾ ಮಿಸ್ಕಿತಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *