ಬಂಟ್ವಾಳ:ಇಲ್ಲಿನ ಅಮ್ಟೂರು ಗ್ರಾಮದ ಕಟ್ಟೆಮಾರು ಎಂಬಲ್ಲಿ ರೂ 40ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಧೂಮಾವತಿ ಬಂಟ ದೈವಸ್ಥಾನ ಮೊಕ್ತೇಸರ ಮೋಹನರಾಜ್ ಚೌಟ ಪುಂಜೋಳಿಮಾರುಗುತ್ತು ಇವರು ಗುರುವಾರ ಶಿಲಾನ್ಯಾಸ ನೆರವೇರಿಸಿದರು.
ಸಜಿಪ ಮಾಗಣೆನಾಲ್ಕೈತ್ತಾಯ ದೈವಸ್ಥಾನ ಗಡಿಪ್ರಧಾನ ಶಂಕರ ಯಾನೆ ಕೋಟಿ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ಚೆನ್ನಪ್ಪ ಕೊಟ್ಯಾನ್, ಪ್ರಮುಖರಾದ ಸುರೇಶ ಕೆ.ಪಿ.ಮಾಡೂರು, ಬಾಬು ಶಾಸ್ತ ಕಿನ್ಯ ಮತ್ತಿತರರು ಶುಭ ಹಾರೈಸಿದರು. ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ಸ್ವಾಗತಿಸಿ, ವಂದಿಸಿದರು.
—
