ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಸಭಾಭವನದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಯೋಗಗುರು ರಾಘವೇಂದ್ರ ರಾವ್ ಕಾರ್ಯಕ್ರಮ ಉದ್ಘಾಟಿಸಿದರು.

SMC

SMC Yoga
ಪದವಿ ಕಾಲೇಜಿನ ಪ್ರಾಂಶುಪಾಲರಾದ Prof. ಎಚ್.ಚಂದ್ರಶೇಖರ್ ದೀಕ್ಷಿತ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ,
ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯ ಸದೃಢವಾಗುವುದರ ಜೊತೆಗೆ, ಮಾನಸಿಕ ಆರೋಗ್ಯವನ್ನೂ ವೃದ್ಧಿಸಬಹುದು. ಇದರ ಸಂಪೂರ್ಣ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮೂಡುಬಿದಿರೆ ಯೋಗ ಸಮಿತಿಯ ಪದಾಧಿಕಾರಿಗಳಾದ ಸುಪ್ರಭಾ, ಪ್ರಕಾಶ್ ಅಮೀನ್, ಯತಿರಾಜ ಜೈನ್, ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ Prof.ರಮೇಶ್ ಭಟ್, ಕಾಲೇಜಿನ ಎನ್.ಸ್.ಸಿ. ಅಧಿಕಾರಿ ಮೇಜರ್ ಡಾ. ರಾಧಾಕೃಷ್ಣ ಶೆಟ್ಟಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರಮೀಳಾ, ರೋವರ್ಸ್ ಘಟಕದ ಅಧಿಕಾರಿ ನಾಗೇಂದ್ರ ದಾತೆ ಮತ್ತು ರೇಂಜರ್ಸ್ ಘಟಕದ ಅಧಿಕಾರಿ ಯಶೋದಾ ಉಪಸ್ಥಿತರಿದ್ದರು.
ಸೀಮಾ ಸ್ವಾಗತಿಸಿದರು. ಶ್ರೀಕಲಾ ನಿರೂಪಿಸಿದರು. Prof. ರಮೇಶ್ ಭಟ್ ವಂದಿಸಿದರು. ವಿದ್ಯಾರ್ಥಿಗಳಿಂದ ಯೋಗಾಸನ ಪ್ರದರ್ಶನ ನಡೆಯಿತು.

By Suddi9

Leave a Reply

Your email address will not be published. Required fields are marked *