ಸುದ್ದಿ9ಮಂಗಳೂರು: ಖಗೋಳಶಾಸ್ತ್ರದಲ್ಲಿ ಪಿಎಚ್ಡಿ ಪಡೆಯಲು ಮಂಗಳೂರಿನ ವಿದ್ಯಾರ್ಥಿನಿಯೋರ್ವಳು ಅಮೇರಿಕಾದ ಪ್ರತಿಷ್ಠಿತ ಸ್ಟಾಂಡ್ಫೋರ್ಡ್ ಯುನಿವರ್ಸಿಟಿಯಲ್ಲಿ ಪ್ರವೇಶ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದ್ದಾಳೆ. ಮಂಗಳೂರಿನ ಕದ್ರಿ ನಿವಾಸಿ ಶಾಂತಾ ಹಾಗೂ ಸುರತ್ಕಲ್ನ ಶ್ರೀನಿವಾಸ ದಂಪತಿಯ ಪುತ್ರಿ ಸೌಮ್ಯಾ ಕಾಮತ್ ಈ ಸಾಧನೆ ಮಾಡಿದ ವಿದ್ಯಾರ್ಥಿನಿ.

ಸ್ಟಾಂಡ್ಫೋರ್ಡ್ ಯುನಿವರ್ಸಿಟಿ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿದ್ದು, ವಿಶ್ವದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಯಾಗಿದೆ. ವಿಶ್ವದ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಇಲ್ಲಿ ಖಗೋಳಕ್ಕೆ ಸಂಬಂಧಿಸಿದಂತೆ ಹಲವು ಮಹತ್ತರ ವಿಚಾರಗಳ ಅಧ್ಯಯನ ನಡೆಯುತ್ತಿದೆ
