ಮೂಡುಬಿದಿರೆ : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಮೂಡುಬಿದಿರೆಯ ಸಪಳಿಗ ಯಾನೆ ಗಾಣಿಗರ ಸೇವಾ ಸಂಘ, ಗಾಣಿಗರ ಮಹಿಳಾ ವೇದಿಕೆ ಮತ್ತು ಯುವ ವೇದಿಕೆ ಇವುಗಳ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿ ವೇತನ, ಪುಸ್ತಕ ವಿತರಣೆಯೊಂದಿಗೆ ನಡೆದ ವಾರ್ಷಿಕ ಮಹಾಸಭೆಯು ನಡೆಯಿತು.

MUMBAI ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತನಗಾಗಿ, ತನ್ನ ಪರಿವಾರಕ್ಕಾಗಿ ಮಾತ್ರ ದುಡಿದು ಸಂಪಾದಿಸುವುದಲ್ಲ. ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ, ಸಮಾಜ ಸೇವಾ ಚಟುವಟಿಕೆಗಳಿಗೆ ಸಮರ್ಪಿಸುವುದರಲ್ಲೇ ನಮ್ಮ ಬದುಕಿನ ಸಾರ್ಥಕ್ಯ ಇದೆ’ ಎಂದು ಹೇಳಿದರು. ಮೂಡುಬಿದಿರೆ ಸಂಘಕ್ಕೆ ರೂ. 1 ಲಕ್ಷದ ದೇಣಿಗೆ ನೀಡಿ ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಪ್ರತಾಪ್ ಬೆಟ್ಕೇರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾ.ಪಂ. ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ಪತ್ರಕರ್ತ ಮೋಹನ್ ಕೆ. ಶ್ರೀಯಾನ್ ರಾಯಿ ಭಾಗವಹಿಸಿದ್ದರು.
ಸನ್ಮಾನ: ಸಮಾಜದ ಹಿರಿಯ ನಾಗರಿಕರಾದ ಸುಂದರ್ ಪುತ್ರನ್ ನಾರಂಪಾಡಿ ಹಾಗೂ ಲಲಿತಾ ಸಾಲ್ಯಾನ್ ಗುರುಬೆಟ್ಟು ಅವರನ್ನು ಸಮ್ಮಾನಿಸಲಾಯಿತು.
ಅರ್ಹತಾ ವಿದ್ಯಾರ್ಥಿ ವೇತನ:
ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದಿ. ಸಾಧು ಬಿ. ಪುತ್ರನ್ ಸ್ಮರಣಾರ್ಥ ಪ್ರಥಮ ರೂ. 1,500, ದ್ವಿತೀಯ ರೂ.1,000, ಎಸ್ಎಸ್ಎಲ್ಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ದಿ.ಜಾರಪ್ಪ ಮೇಸ್ತ್ರಿ ಸ್ಮರಣಾರ್ಥ ಪ್ರಥಮ ರೂ. 2,500, ದ್ವಿ. ರೂ. 1,500, ತೃ. ರೂ. 1000, 7ನೇ ತರಗತಿಯ ಪ್ರತಿಭಾನ್ವಿತರಿಗೆ ದಿ.ಸುಂದರಿ ಜಾರಪ್ಪ ಸ್ಮರಣಾರ್ಥ ಪ್ರ.ರೂ. 1000, ದ್ವಿ. ರೂ. 750, ತೃ. ರೂ. 500 ಹಾಗೂ ಕ್ರೀಡಾಸಾಧಕ ಇಬ್ಬರು ವಿದ್ಯಾರ್ಥಿಗಳಿಗೆ ದಿ.ಬಾಬು ಸಪಳಿಗ ಸ್ಮರಣಾರ್ಥ ರೂ. 500 ಹಾಗೂ ರೂ. 250 ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು.
80 ವಿದ್ಯಾರ್ಥಿಗಳಿಗೆ ಸುಮಾರು ರೂ. 20,000 ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು. ಸಂಘದ ಗೌರವಾಧ್ಯಕ್ಷ ಪದ್ಮನಾಭ ಕಟೀಲ್ ರೂ. 15,000, ಶ್ರೀನಿವಾಸ ಟೈಲರ್ ಪಡ್ಡಂದಡ್ಕ , ಕೇಶವ ಪೆÇಳಲಿ ತಲಾ ರೂ. 2000, ನಿಖಿಲ್ ಬನ್ನಡ್ಕ ರೂ. 1,000 ವಿದ್ಯಾನಿಧಿಗೆ ಸಮರ್ಪಿಸಿದ್ದರು.
ವಿವಿಧ ಕ್ರೀಡೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಮುಂದಿನ ವರ್ಷದ ಪದಾ„ಕಾರಿಗಳನ್ನು ಆರಿಸಲಾಯಿತು.
ದಾಮೋದರ ಭಟ್ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ ಬಂಗೇರ ಸ್ವಾಗತಿಸಿ, ಜತೆ ಕಾರ್ಯದರ್ಶಿ ಕೇಶವ ಪೆÇಳಲಿ ವಾರ್ಷಿಕ ವರದಿ, ಮಹಿಳಾ ವೇದಿಕೆ ಅಧ್ಯಕ್ಷೆ ಸಂಧ್ಯಾ ಸಂದೀಪ್ ಲೆಕ್ಕ ಪತ್ರ ಮಂಡಿಸಿದರು. ಸಂಘದ ಗೌರವಾಧ್ಯಕ್ಷ ಸದಾಶಿವ ಬಂಗೇರ, ಯುವ ವೇದಿಕೆಯ ಅಧ್ಯಕ್ಷ ಪ್ರಶಾಂತ್ ಬಾರಾಡಿ, ಎಡಪದವು ಸಂಘದ ಅಧ್ಯಕ್ಷ ಬಿ. ಎಸ್. ಎಡಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಜಗನ್ನಾಥ ಸಪಳಿಗ ವಂದಿಸಿದರು. ಕೇಶವ ಪೆÇಳಲಿ ನಿರೂಪಿಸಿದರು.
