ಸುದ್ದಿ9ಮೂಡುಬಿದರೆ: ಪುರಸಭಾ ವ್ಯಾಪ್ತಿಯ ಕಡಲಕೆರೆ ಬಳಿ ನಡೆತೋಪಿನಲ್ಲಿ ಶನಿವಾರ ಗಂಡಸಿನ ಅಸ್ಥಿಪಂಜರ ಪತ್ತೆಯಾಗಿದೆ.
ಶುಕ್ರವಾರ ಸಂಜೆ ಕಟ್ಟಿಗೆ ತರಲೆಂದು ಸ್ಥಳೀಯ ಮಹಿಳೆಯರು ಕಾಡಿಗೆ ಹೋಗಿದ್ದು ಈ ವೇಳೆ ತಲೆಬುರುಡೆ ಪತ್ತೆಯಾಗಿತ್ತು. ಇದರಿಂದ ಭಯಗೊಂಡ ಅವರು ಸ್ಥಳೀಯ ಪುರಸಭಾ ಸದಸ್ಯ ನಾಗಾರಾಜ ಪೂಜಾರಿಯವರಿಗೆ ಮಾಹಿತಿ ನಿಡಿದರು. ಅವರು ಇತರರೊಂದಿಗೆ ಶನಿವಾರ ಬೆಳಿಗ್ಗೆ ಸ್ಥಳಕ್ಕೆ ಹೋಗಿ ಪರೀಶಿಲನೆ ನಡೆಸಿದಾಗ ಅಸ್ಥಿಪಂಜರ ಕಂಡುಬಂದಿದೆ. ಅಕೆಶೀಯ ಮರದ 10 ಅಡಿ ಎತ್ತರದಲ್ಲಿ ಮುರಿದ ಕೊಂಬೆಗೆ ನೈಲಾನ್ ಹಗ್ಗ ಬಿಗಿದಿರುವ ಕುರುಹು ಕಂಡು ಬಂದಿದೆ. ಮೃತ ವ್ಯಕ್ತಿ ಧರಿಸಿದ್ದ ಚಪ್ಪಲಿ, ಶಟ್, ಪ್ಯಾಂಟ್ ಆಸುಪಾಸಿನ ಅಲ್ಲಲ್ಲಿ ಚದುರಿ ಬಿದ್ದಿದೆ. 30ರಿಂದ 35 ವರ್ಷದ ಒಳಗಿನ ಗಂಡಸಿನ ಶವ ಇರಬಹುದೆಂದು ಶಂಕಿಸಲಾಗಿದೆ. ಮೊಳೆಗಳು ನೆಡುತೋಪಿನ ಅಲ್ಲಲ್ಲಿ ಚದುರಿದೆ. ಸಮೀಪದಲ್ಲೇ ಚಾಕು ಕೂಡ ಪತ್ತೆಯಾಗಿದ್ದು,ಸುಮಾರು ನಾಲ್ಕೈದು ತಿಂಗಳ ಹಿಂದೆ ಘಟನೆ ನಡೆದಿರಬಹುದೆಂದು ಪೊಲೀಸರು ಸಂಶಯಿಸಿದ್ದಾರೆ. ಮೂಡುಬಿದರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ,




