ಕೈಕಂಬ:ಕುಪ್ಪೆಪದವು ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿಯ ವರ್ಗಾವಣೆ ಪ್ರಯತ್ನ ನಡೆಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು ಪಿ.ಡಿ.ಒ ವರ್ಗಾವಣೆ ಪ್ರಯತ್ನದ ವಿರುದ್ಧ ಪ್ರತಿಭಟಣೆಗೆ ಸಜ್ಜಾಗುತ್ತಿದ್ದಾರೆ. ಕಳೆದ ವರ್ಷ ಜೂನ್ 8ರಂದು ತರಬೇತಿಯ ನಂತರ ಮೊದಲ ಬಾರಿಗೆ ಪಂಚಾಯತ್ ಅಭಿವೃಧ್ಧಿ ಅಧಿಕಾರಿಯಾಗಿ ಇಲ್ಲಿಗೆ ಆಗಮಿಸಿದ್ದ ಸವಿತಾ ಮಂಧೋಳಿಕರ್ ಪಂಚಾಯತ್‍ನ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ ಸದಸ್ಯರಿಗೆ ಗೌರವ ಕೊಡದೇ ನಮ್ಮ ಮಾತೇ ಕೇಳುತ್ತಿಲ್ಲ ಎಂದು ಕೆಲವು ಪಂಚಾಯತ್ ಸದಸ್ಯರ ಆರೋಪವಾಗಿದೆ.

5vp prathibataneನಿಷ್ಠಾವಂತ ಅಧಿಕಾರಿಯಾಗಿರುವ ಇವರನ್ನು ವರ್ಗಾವಣೆ ಮಾಡುವ ಪ್ರಯತ್ನದ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ದು, ವರ್ಗಾವಣೆ ಪ್ರಯತ್ನದ ವಿರುದ್ಧ ಬ್ರಹತ್ ಪ್ರತಿಭಟನೆಗೆ ಗ್ರಾಮಸ್ಥರು ಸಜ್ಜಾಗುತ್ತಿದ್ದಾರೆ.ಕಳೆದ ಕೆಲ ದಿನಗಳ ಹಿಂದೆ ಕುಡಿಯುವ ನೀರಿಗಾಗಿ ಕೆಲಗ್ರಾಮಸ್ಥರು ಪಂಚಾಯತ್‍ಗೆ ಮುತ್ತಿಗೆ ಹಾಕಿದ್ದು, ಪಂಚಾಯತ್‍ನ ಪಂಪ್ ಅಪರೇಟರ್ ಪಂಪ್‍ಹೌಸ್‍ನ ಬೀಗದ ಕೀಗಳನ್ನು ಪಂಚಾಯತ್‍ಗೆ ಒಪ್ಪಿಸಿ ನನ್ನಿಂದ ನೀರು ಸರಬರಾಜು ಸಾಧ್ಯವಿಲ್ಲ ಹೇಳಿ ಹೊಗಿದ್ದ ಅದರೆ ಆನಂತರವು ಆತ ಕೆಲ ಪ್ರದೇಶಗಳಿಗೆ ನೀರು ಪೂರೈಸಿ ಉಳಿದ ಪ್ರದೇಶಗಳಿಗೆ ನೀರು ಪೂರೈಸಿರಲಿಲ್ಲ . ಪಂಪ್ ಅಪರೇಟರ್ ಈ ರೀತಿ ಮಾಡಲು ಕೆಲವು ಪಂಚಾಯತ್ ಸದಸ್ಯರೇ ಕಾರಣವಾಗಿದ್ದು, ನೀರು ಪೂರೈಕೆ ಸ್ಥಗತಗೊಳಿಸಿ ಗ್ರಾಮಸ್ಥರನ್ನು ರೊಚ್ಚಿಗೆಬ್ಬಿಸುವುದೇ ಉದ್ದೇಶವಾಗಿತ್ತೆಂದು ಪ್ರತಿಭಟನಾಕಾರರೇ ಆರೋಪಿಸಿದ್ದರು. ನೀರಿನ ಸಮಸ್ಯೆ ಪರಿಹಾರಕ್ಕಾಗಿ ಚರ್ಚಿಸಲು ತಾಲೂಕು ಪಂಚಾಯತ್ ಕಾರ್ಯನಿರ್ವಾಣಾಧಿಕಾರಿಯವರು ಪಂಚಾಯತ್‍ಗೆ ಬೇಟಿ ಕೊಟ್ಟಾಗೆಲ್ಲಾ ಕೆಲವು ಪಂಚಾಯತ್ ಸದಸ್ಯರು ಪಿ.ಡಿ.ಒ ವರ್ಗಾವಣೆಗೆ ಪಟ್ಟು ಹಿಡಿದಿದ್ದರು. ಸಭೆಯೊಂದರಲ್ಲಿ ಪಂಚಾಯತ್ ಸದಸ್ಯರೋರ್ವರು ನಿರ್ಣಯದ ಪ್ರತಿಯನ್ನು ಸುಟ್ಟು ಹಾಕಿದ್ದೂ ಕೂಡ ಪಿ.ಡಿ.ಒ ವರ್ಗಾವಣೆಗಾಗಿ ಮಾಡಿದ ನಾಟಕವಾಗಿತ್ತು. ಸದಸ್ಯರು ಪಿ.ಡಿ.ಒ ಪರವಾಗಿದ್ದು ಇನ್ನುಳಿದ ಕೆಲವು ಪಂಚಾಯತ್ ಸದಸ್ಯರು ಅಭಿವೃದ್ಧಿ ಅಧಿಕಾರಿಯವರು ನಮ್ಮ ಮಾತು ಕೇಳುತ್ತಿಲ್ಲ ನಿಯಮದ ಪ್ರಕಾರವೇ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ವರ್ಗಾವಣೆಗೆ ಪ್ರಯತ್ನಿಸುತ್ತುರುವುದಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

By suddi9

Leave a Reply

Your email address will not be published. Required fields are marked *