ಮೂಡುಬಿದಿರೆ: ನಗರಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ ಪುಚ್ಚಮೊಗರು ನೀರಿನ ಡ್ಯಾಂ ಗೆ ಚುನಾಯಿತ ಪುರಸಭಾ ಸದಸ್ಯ ಪ್ರಸಾದ್ ಕುಮಾರ್, ನಾಗರಾಜ್ ಪೂಜಾರಿ, ನಿಕಟಪೂರ್ವ ಪುರಸಭಾ ಸದಸ್ಯ ಎಂ. ಬಾಹುಬಲಿ ಪ್ರಸಾದ್, ದಿನೇಶ್ ಪೂಜಾರಿ ಭೇಟಿ ಕೊಟ್ಟು ಕುಡಿಯುವ ನೀರಿನ ಅಭಾವದ ಬಗ್ಗೆ ಪರಿಶೀಲಿಸಿದರು.
ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ ಬರದಂತೆ ಮುಂಜಾಗೃತಾ ಕ್ರಮಕ್ಕೆ ಸಂಭಂಧಪಟ್ಟ ಪುರಸಭಾ ಅಧಿಕಾರಿಗಳನ್ನು ಆಗ್ರಹಿಸಿದರು.

