ಮೂಡುಬಿದಿರೆ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಿವಿಧ ವಾರ್ಡ್‍ಗಳಲ್ಲಿ ಕಾಯಕರ್ತರು ಸಂಭ್ರಮಾಚರಿಸಿದರು.

Moodubidire bjp Vijayostava
ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ಮೂಡುಬಿದಿರೆ ಪುರಸಭೆಯಲ್ಲಿ ಸರ್ಕಾರಿ ಯೋಜನೆ, ಅನುದಾನಗಳು ಅರ್ಹರಿಗೆ ಸಿಗುತ್ತಿಲ್ಲ ಎಂಬ ಆರೋಪಗಳಿದ್ದವು. ಇದೀಗ ಜನತೆ ಬಿಜೆಪಿಗೆ ಮೊದಲ ಬಾರಿಗೆ ಅಧಿಕಾರ ನೀಡುವ ಮೂಲಕ ಆಶೀರ್ವದಿಸಿದೆ. ಈ ಅವಕಾಶವನ್ನು ಸರ್ಕಾರದ ಸೌಲಭ್ಯಗಳನ್ನು ಅರ್ಹರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಭೃಷ್ಠಾಚಾರ ರಹಿತ ಆಡಳಿತ ನೀಡುವುದು ಬಿಜೆಪಿಯ ಆದ್ಯತೆ. ಈ ಗೆಲುವು ಮೂಡುಬಿದಿರೆಯ ಜನತೆ ನಿನ್ನೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯವರಿಗೆ ನೀಡಿದ ಉಡುಗೊರೆ ಎಂದರು.

By suddi9

Leave a Reply

Your email address will not be published. Required fields are marked *