ಬಂಟ್ವಾಳ: ಸಜೀಪಮೂಡ ಗ್ರಾಮದ ಅನ್ನಪ್ಪಾಡಿ ಶ್ರೀ ಬಾಲಗಣಪತಿ ದೇವಸ್ಥಾನದ ವಾರ್ಷಿಕ ಪೂಜೋತ್ಸವ ನಡೆಯಿತು. ಇದರ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಪ್ರಾತಃಕಾಲ ಪುಣ್ಯಾಹ ಪಂಚಗವ್ಯ ಬಾಲಗಣಪತಿ ಹೋಮ ಶ್ರೀ ನಾಗದೇವರಿಗೆ ಫಲಪಂಚಾಮೃತ ಕಲ್ಪೋಕ್ತ ಪೂಜೆ, ನಾಗತಂಬಿಲ, ಶ್ರೀ ಬಾಲಗಣಪತಿ ದೇವರಿಗೆ ಪ್ರಸನ್ನ ಪೂಜೆ, ಮಹಾ ಮಂಗಳಾರತಿ, ವಿಶೇಷ ಸೇವಾ ಪೂಜೆ, ಮಹಾಪೂಜೆ ನಡೆಯಿತು.
ಸಜೀಪನಡು ಶ್ರೀ ಷಣ್ಮುಖ ಬಾಲ ಭಜನಾ ತಂಡದಿಂದ ಭಜನಾ ಸಂಕೀರ್ತನೆ, ವಿಶ್ವಭಾರತಿ ಯಕ್ಷ ಸಂಜೀವಿನಿ ಮುಡಿಪು ಇವರಿಂದ ತಾಳಮದ್ದಳೆ, ಅನ್ನದಾನ ಸೇವೆ ಜರಗಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ, ಪದಾಧಿಕಾರಿಗಳಾದ ಕೆ. ಸದಾನಂದ ಶೆಟ್ಟಿ, ಸುರೇಶ ಸಾರ್ತಾವು, ರಮೇಶ್ , ಚಂದ್ರಹಾಸ್, ಜಯಪ್ರಕಾಶ್, ಸುರೇಶ್ ಬೊಟ್ಟ, ಲಿಂಗಪ್ಪ ಎಸ್. ದೋಟ, ದೇವದಾಸ, ಕೃಷ್ಣಶಾಮ, ಎಂ.ವೆಂಕಟೇಶ ಭಟ್, ರಾಕೇಶ ಶೆಟ್ಟಿ, ಕುಸುಮಾ, ರೂಪಾ, ಉಷಾ, ಪ್ರೇಮಾ ಶೆಟ್ಟಿ, ಎಂ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

