ಬಂಟ್ವಾಳ : 1008 ಭಗವಾನ್ ಶ್ರೀ ಆದಿನಾಥ ಸ್ವಾಮಿ ಜಿನಚೈತ್ಯಾಲಯ ಇದರ ಜಿನಬಿಂಬ ಪ್ರತಿಷ್ಟಾ ಮಹೋತ್ಸವದ 50ನೇ ವರ್ಧಂತ್ಯೋತ್ಸವದ ಅಂಗವಾಗಿ ಬಂಟ್ವಾಳ ಜೈನ್ ಮಿಲನ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಭಗವಾನ್ ಶ್ರೀ ಆದಿನಾಥ ಸ್ವಾಮಿ ಜಿನ ಚೈತ್ಯಾಲಯ ದಲ್ಲಿ ಜರಗಿತು.

KAR_1208
ಹಸಿ-ಮಸಿ, ವಾಣಿಜ್ಯ ಮುಂತಾದ 72ಉತ್ತಮ ಕಲೆಗಳ ಪ್ರವರ್ತಕರು , ಆದಿ ಪ್ರವರ್ತಕರಾದ ಭಗವಾನ್ 1008ಶ್ರೀ ಆದಿನಾಥ ತೀರ್ಥಂಕರರ ಸೇವೆ ಮಾಡುವುದರಿಂದ ಆತ್ಮ ಕಲ್ಯಾಣ ಸಾಧ್ಯ . ಅದರಂತೆ ಶ್ರಾವಕರು ಪಂಚಾಣು ವೃತ ಪಾಲನೆ, ಅನುಯೋಗಗಳ ಅಧ್ಯಯನ ಮತ್ತು ಷಟ್ಕಾರ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜೈನಮಠ ಮೂಡಬಿದ್ರೆ ಜಗದ್ಗುರು ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನವಿತ್ತರು.

KAR_1240
ಬಂಟ್ವಾಳ ಬಸದಿ ಹಾಗೂ ಪರಿಸರದ ಬಗ್ಗೆ ತನ್ನ ಬಾಲ್ಯದ ದಿನಗಳ ಬಗ್ಗೆ ತಮ್ಮ ಸವಿನೆನಪನ್ನು ಹಂಚಿಕೊಂಡರು. ಬಂಟ್ವಾಳದ ಶ್ರಾವಕರು ಎಲ್ಲರನ್ನೂ ಒಗ್ಗೂಡಿಸಿಕೊಂಡು ಬಸದಿಯ ಕೆಲಸಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಡಿ.ಹರ್ಷೇಂದ್ರ ಕುಮಾರ್ ನುಡಿದರು.
ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಭಾರತೀಯ ಜೈನ್ ಮಿಲನ್ ಬಂಟ್ವಾಳ ಇದರ ಅಧ್ಯಕ್ಷ ಡಾ.ಸುದೀಪ್ ಕುಮಾರ್ ಸಿದ್ದಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ವಲಯ-8ರ ಉಪಾಧ್ಯಕ್ಷ ಸುದರ್ಶನ್ ಜೈನ್ , ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ದ ಜಯರಾಜ್ ಕಂಬಳಿ, ಮಂಗಳೂರು ವಿಭಾಗ ವಲಯ-8ರ ಕಾರ್ಯದರ್ಶಿ ಸುಭಾಸ್ಚಂದ್ರ ಜೈನ್ ಉಪಸ್ಥಿತರಿದ್ದರು.
ದೀಪಕ್ ಕುಮಾರ್ ಇಂದ್ರ ಸ್ವಾಗತಿಸಿದರು. ಕಾರ್ಯದರ್ಶಿ ಸನ್ಮತಿ ಜಯಕೀರ್ತಿ ವಂದಿಸಿ ಹರ್ಷರಾಜ್ ಬಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *