ಬಂಟ್ವಾಳ: ಕರಾವಳಿಯ ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಬವಣೆ ತೀವ್ರವಾಗಿರುವ ಹಿನ್ನಲೆಯಲ್ಲಿ ಪಿಯುಸಿ ತರಗತಿ ಆರಂಭವನ್ನು ಜೂನ್ ಮೊದಲವಾರದವರೆಗೆ ಮುಂದೂಡುವಂತೆ ಬಂಟ್ವಾಳ ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಅವರು ಪ.ಪೂ.ಶಿಕ್ಷಣ ಂಮಡಳಿಯ ನಿರ್ದೇಶಕರಿಗೆ ಪತ್ರ ಮುಖೇನ ಆಗ್ರಹಿಸಿದ್ದಾರೆ. ಬಹುತೇಕ ಪಿಯು ಕಾಲೇಜುಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿ ಕೊಳವೆ ಬಾವಿಗಳು ಭತ್ತಿಹೋಗಿವೆ.
ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಸಲು ಸ್ಥಳೀಯಾಡಳಿತ ಸಂಸ್ಥೆಗಳು ತತ್ತರಿಸಿವೆ ಬೇಸೊಗೆ ಕಾಲದ ಇತ್ತೀಚಿಗಿನ ತಾಪಮಾನ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.ಹವಮಾನ ಇಲಾಖೆಯ ಪ್ರಕಾರ ಜೂನ್ ಮೊದಲವಾರದ ವರೆಗೆ ಮುಂಗಾರು ಆರಂಭವವಾಗುವ ಲಕ್ಷಣಗಳಿಲ್ಲ ಎಂದು ತಿಳಿಸಿವೆ . ಹಾಗಾಗಿ ಈ ಎಲ್ಲಾ ಅಂಶಗಳನ್ನು ಪೆಇಗಣಿಸಿ ಪಿಯು ಕಾಲೇಜ್ ಆರಂಭವನ್ನು ಜೂನ್ ಮೊದಲವಾರಕ್ಕೆ ಮುಂದೂಡುವಂತೆ ಪ್ರಭು ಮನವಿಯಲ್ಲಿ ಒತ್ತಾಯಿಸಿದ್ದಾರೆ.
