ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ವಿನಾಯಕ ದೇವರಿಗೆ ಸೀಯಾಳಭಿಷೇಕ ಮಾಡಲಾಯಿತು. ಈ ಸಂದರ್ಭ ಆಶೀರ್ವಚನ ನೀಡಿದ ಶ್ರೀಗಳು ಪ್ರಕೃತಿಯನ್ನು ಉಳಿಸುವ ಸಂಕಲ್ಪವನ್ನು ನಾವು ಮಾಡಬೇಕು ಎಂದರು. ಪರ್ವತಗಳ ಅಡಿಭಾಗದಲ್ಲಿರುವ ಶಿಲಾಪಾತ್ರೆಯಲ್ಲಿ ಮಳೆ ನೀರು ಸಂಗ್ರಹಗೊಂಡು ವರ್ಷ ಪೂರ್ತಿ ನೀರಿನ ಒರತೆ ಒದಗಿಸುತ್ತದೆ. ಪ್ರಸ್ತುತ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಎಲ್ಲರೂ ಮಳೆಗಾಗಿ ಪ್ರಾರ್ಥಿಸಬೇಕಾಗಿದೆ ಎಂದರು.

ಈ ಸಂದರ್ಭ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಸಿ. ಭಂಡಾರಿ, ಜಿಲ್ಲಾ ಪಂಚಾಯತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಸಜೀಪ ಮೂಡ ಗ್ರಾ.ಪಂ ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ಪ್ರಧಾನ ಅರ್ಚಕ ವೇ.ಮೂ. ಮಹೇಶ್ ಭಟ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಭಾಕರ ಶೆಟ್ಟಿ, ಎಸ್. ಗಂಗಾಧರ ಭಟ್, ಎಸ್.ಎಂ. ಗೋಪಲಕೃಷ್ಣ ಆಚಾರ್ಯ, ಮೋಹನದಾಸ ಪೂಜಾರಿ ಬೊಳ್ಳಾಯಿ, ರಮಾ ಎಸ್ ಭಂಡಾರಿ
ಸೀತರಾಮ ಶೆಟ್ಟಿ ಕಾಂತಡಿ, ಅಂಕದ ಕೋಡಿ ಬಾಳಿಕೆ ಆನಂದ ರೈ, ಯಶೋಧರ ರೈ ಮಾಡಂತಾಡಿ ಗುತ್ತು, ದಳಂದಿಲ ಮನೋಜ್ ಆಳ್ವ, ಬರಂಗರೆ ಚಂದ್ರಶೇಖರ್ ನಾಯ್ಕ್, ಚಂದ್ರಸೇಖರ ಗಟ್ಟಿ ಅಂದಾಡಿ, ರಾಜಣ್ಣ ನಂದಾವರ ಮತ್ತಿತರರು ಹಾಜರಿದ್ದರು.

