ಬಂಟ್ವಾಳ: ಸರಪಾಡಿಯಲ್ಲಿ ನೇತ್ರಾವತಿ ನದಿಗೆ  ನಿರ್ಮಿಸಲಾದ ಎಂ ಆರ್ ಪಿ ಎಲ್  ಡ್ಯಾಂ ಗೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರು ಸೋಮವಾರ     ಭೇಟಿ ನೀಡಿ ಪರಿಶೀಲನೆ ನಡೆಸಿದರು.
IMG-20190520-WA0021ಈ ಸಂದರ್ಭದಲ್ಲಿ ನಗರ ನೀರು ಸರಬರಾಜು ಇಂಜಿನಿಯರ್   ಶೋಭಾಲಕ್ಷ್ಮಿ ,ಪುರಸಭಾ ಮುಖ್ಯಾಧಿಕಾರಿ ಮೆಬೆಲ್ ಡಿಸೋಜಾ,ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಸಹಿತ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶಾಸಕರು ಚರ್ಚಿಸಿದರು‌.
IMG-20190520-WA0025ಡ್ಯಾಂನ ಮೇಲ್ಭಾಗದಲ್ಲಿ ಹೂಳು ತುಂಬಿದ್ದು ನೀರಿನ ಕೆಳ ಹರಿವಿಗೆ ತೊಂದರೆಯಾಗುತ್ತಿರುವ  ಹಿನ್ನಲೆಯಲ್ಲಿ ಹೂಳು ತೆರವಿಗೆ   ಅಧಿಕಾರಿಗಳಿಗೆ   ಸೂಚಿಸಿದರು.ಈ ಸಂದರ್ಭದಲ್ಲಿ  ಪುರಸಭಾ  ಸದಸ್ಯ ಗೋವಿಂದ ಪ್ರಭು,ಮಾಜಿ ಸದಸ್ಯ    ಬಿ.ದೇವದಾಸ ಶೆಟ್ಟಿ , ಗಣೇಶ್ ರೈ ಮಾಣಿ ಮತ್ತು ಎಂ.ಆರ್.ಪಿ.ಎಲ್ ಡ್ಯಾಂನ ಸಿಬ್ಬಂದಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *