ಬಂಟ್ವಾಳ: ಎಲ್‍ಕೆಜಿ ಕಲಿಯುತ್ತ ಭವಿಷ್ಯದ ಬದುಕಿನ ಕನಸು ಕಾಣುತ್ತಿದ್ದ 6 ವರ್ಷ ಪ್ರಾಯದ ಪುಟ್ಟ ಬಾಲಕನೋರ್ವ ಮೆದುಳಿನ ರಕ್ತನಾಳದ ತೊಂದರೆಯಿಂದ ಬಳಲುತ್ತಿದ್ದಾನೆ. ಆಡಿ, ಕುಣಿದಾಡಬೇಕಾದ ವಯಸ್ಸಿನಲ್ಲಿ ಆಸ್ಪತ್ರೆಯಲ್ಲಿ ದಿನ ಕಳೆಯುತ್ತಿದ್ದಾನೆ. ಬಡಕುಟುಂಬದ ತಂದೆ ತಾಯಿ ಮಗನ ಚಿಕಿತ್ಸೆಗಾಗಿ ಹಣವಿಲ್ಲದೆ ದಾನಿಗಳ ನೆರವಿಗಾಗಿ ಎದುರು ನೋಡುತ್ತಿದ್ದಾರೆ.

BTW_MAY17_9
ಬಂಟ್ವಾಳ ತಾಲೂಕಿನ ಕೊಯಿಲಾ ಗ್ರಾಮದ ಪಾಂಡವರಗುಡ್ಡೆ ನಿವಾಸಿ ಅನಿಲ್ ಹಾಗೂ ಪವಿತ್ರ ದಂಪತಿಗಳ ಪುತ್ರ ಚಿರಾಗ್(6) ಮೆದುಳಿನಿ ರಕ್ತನಾಳದ ತೊಂದರೆಯಿಂದ ಬಳಲುತ್ತಿರುವ ಬಾಲಕ.
ಇತ್ತೀಚೆಗೆ ಮನೆಯ ಟೆರೆಸ್ ಮೇಲಿಂದ ಆಕಸ್ಮಿಕವಾಗಿ ಬಿದ್ದ ಬಾಲಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದಾಗ ಮೆದುಳಿನ ರಕ್ತನಾಳದ ಸಮಸ್ಯೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಪ್ರಸ್ತುತ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ರೋಗ ಗುಣಮುಖನಾಗಲು ಶಸ್ತ್ರಚಿಕಿತ್ಸೆ ಮಾಡಬೇಕಾದರೆ 10 ಲಕ್ಷ ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈಗಾಗಾಲೇ ಸಾಲ ಮಾಡಿ ಎರಡು ಲಕ್ಷ ರುಪಾಯಿಯನ್ನು ಖರ್ಚು ಮಾಡಿದರೆ ಇನ್ನೂ 8 ಲಕ್ಷ ರುಪಾಯಿ ಅಗತ್ಯವಿದ್ದು ಬೀಡಿ ಕಟ್ಟುವ ತಾಯಿ, ಕೂಲಿ ಕೆಲಸ ಮಾಡುವ ತಂದೆ ಇಷ್ಟೊಂದು ಹಣವನ್ನು ಎಲ್ಲಿಂದ ತರವುದೆಂದು ಚಿಂತಾಕ್ರಾಂತರಾಗಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸಲು ಸಾಧ್ಯವಾಗದೇ ಚಿರಾಗ್ ಪೋಷಕರು ಕಂಗಲಾಗಿದ್ದಾರೆ. ಹೇಗಾದರೂ ಮಾಡಿ ಮಗನನ್ನು ಕಾಡುತ್ತಿರುವ ರೋಗದಿಂದ ಗುಣಮುಖರನ್ನಾಗಿಸಬೇಕೆಂದು ತಂದೆ ತಾಯಿ ಪ್ರಯತ್ನ ಪಡುತ್ತಿದ್ದಾರೆ. ಆಪರೇಷನ್ ಮಾಡಬೇಕಾದರೆ ಆಸ್ಪತ್ರೆಗೆ ಹಣ ಕಟ್ಟಬೇಕಂತೆ, ಆದರೆ ಕೈಯಲ್ಲಿ ನಯ ಪೈಸೆ ಹಣವಿಲ್ಲದೆ ಚಿರಾಗ್ ತಂದೆ, ತಾಯಿ ಸಹೃದಯಿ ದಾನಿಗಳ ನೆರವಿಗಾಗಿ ಎದುರು ನೋಡುತ್ತಿದ್ದಾರೆ. ಈ ಪುಟ್ಟ ಬಾಲಕನ ಚಿಕಿತ್ಸೆಗೆ ಸ್ಪಂದಿಸುವ ಮನಸ್ಸುಗಳಿಗಾಗಿ ಕಾಯುತ್ತಿದ್ದಾರೆ. ನೆರವು ನೀಡುವ ಮನಸ್ಸು ನಿಮ್ಮಲ್ಲಿದ್ದರೆ 7026909847 ಸಂಪರ್ಕಿಸಬಹುದು.
ನೆರವು ನೀಡುವ ದಾನಿಗಳು ಚಿರಾಗ್ ತಾಯಿ ಪವಿತ್ರ ಅವರ ಬ್ಯಾಂಕ್ ಖಾತೆಗೆ ಹಣ ಜಮಾಯಿಸಬಹುದು.
ಹೆಸರು: ಪವಿತ್ರ ಪಿ.,
ಬ್ಯಾಂಕ್ : ಸಿಂಡಿಕೇಟ್, ಬಂಟ್ವಾಳ ಖಾತೆ ಸಂಖ್ಯೆ 01372200106083

By Suddi9

Leave a Reply

Your email address will not be published. Required fields are marked *