ಬಂಟ್ವಾಳ : ಮಕ್ಕಳಿಗೆ ಸೂಕ್ತವಾದ ವೇದಿಕೆಗಳು ಸಿಕ್ಕಾಗ ಅವರಲ್ಲಿ ಅಡಗಿರುವ ಪ್ರತಿಬೆಗಳು ಅನಾವರಣಗೊಳ್ಳುತ್ತದೆ ಎಂದು   ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ    ಹೇಳಿದರು.
ರಾಜ್ಯ ಬಾಲಭವನ ಸೊಸೈಟಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧೊ ಇಲಾಖೆ ಹಾಗೂ ಶಿಶುಅಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಬಿ.ಸಿ.ರೋಡ್ ಸ್ತ್ರೀಶಕ್ತಿ ಭವನದಲ್ಲಿ ಮೇ 8ರಿಂದ18 ರವರೆಗೆ ನಡೆದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರ ವಿವಿಧ ರೀತಿಯ ಯೋಜನೆ ಗಳನ್ನು ಮಕ್ಕಳ ಶೈಕ್ಷಣಿಕ ಹಾಗೂ ಬೌದ್ಧಿಕ ಬೆಳವಣಿಗೆ ದೃಷ್ಟಿಯಿಂದ ಹಮ್ಮಿಕೊಂಡಿದೆ. ಅದರಲ್ಲಿ ಸಿ.ಡಿ.ಪಿ.ಒ.ಇಲಾಖೆಯ ಮೂಲಕ ಹಮ್ಮಿಕೊಂಡಿರುವ ಬೇಸಿಗೆ ಶಿಬಿರ ವೂ ಒಂದು ಎಂದು ಅವರು ಹೇಳಿದರು.
1 (1)
ತಾ.ಪಂನ ಎಡಿ ಪ್ರಶಾಂತ್, ಕಛೇರಿ ಸಹಾಯಕಿ ಶಾಂಭವಿ, ಕೃಷಿ ಇಲಾಖೆಯ ಆತ್ಮಯೋಜನೆಯ  ಪ್ರಿಯಾಂಕ,   ಸಂಪನ್ಮೂಲ ವ್ಯಕ್ತಿಗಳಾದ ಮೌನೇಶ್ ವಿಶ್ವಕರ್ಮ,  ಮುರಳಿಕೃಷ್ಣ ವೇದಿಕೆಯಲ್ಲಿ  ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಕಂಬಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
 ಮೇಲ್ವಿಚಾರಕಿಯರಾಬಿ.ಭಾರತಿ , ಸರೋಜಾಭಟ್ , ಸಿಂಧೂ ಕಾರ್ಯಕ್ರಮ ಸಹಕರಿಸಿದರು.

By suddi9

Leave a Reply

Your email address will not be published. Required fields are marked *