ಸುದ್ದಿ9 ಬಂಟ್ವಾಳ : ತಾಲೂಕು ಇರ್ವತ್ತೂರುಪದವು ಹಾಲು ಉತ್ಪಾದಕರ ಸಹಕಾರ ಸಂಘದ 2013-14ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಕಛೇರಿಯಲ್ಲಿ ಜರಗಿತು.
ಸಂಘದ ಅಧ್ಯಕ್ಷ ಕೆ. ಲಕ್ಷ್ಮಿನಾರಾಯಣ ಉಡುಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಸ್ವಂತ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಮುಂದಿನ ತಿಂಗಳ ಒಳಗಾಗಿ ಕಾರ್ಯಾರಂಭಿಸಲಿದೆ ಎಂದು ಹೇಳಿದರು. ಪ್ರಸ್ತುತ 1 ದಿನಕ್ಕೆ 600 ಲೀ.ಹಾಲು ಸಂಗ್ರಹವಾಗುತ್ತಿದ್ದು , ಮುಂದಿನ ದಿನಗಳಲ್ಲಿ 1000 ಲೀ. ಸಂಗ್ರಹಿಸುವ ಗುರಿ ಹೊಂದಲಾಗಿದೆ. ಅಲ್ಲದೆ ಹಾಲು ಹಾಗೂ ಇನ್ನಿತರ ಕೃಷಿ ಉತ್ಪನ್ನಗಳನ್ನು ಸಹಕಾರಿ ಸಂಘಗಳ ಮೂಲಕ ಮಾರಾಟ ಮಾಡಿ ನಮ್ಮ ಗ್ರಾಮಗಳು ಸಮೃದ್ಧ ಗ್ರಾಮಗಳಾಗಬೇಕು ಎಂದು ನುಡಿದರು. ಕೆ.ಎಂ.ಎಫ್.ನ ವಿಸ್ತರಣಾಕಾರಿ ಕು|ರೋಹಿಣಿ ಅವರು ಕೆ.ಎಂ.ಎಫ್. ನೀಡುವ ಸವಲತ್ತುಗಳ ಬಗ್ಗೆ ವಿವರಿಸಿದರು. ಸಂಘ ಪ್ರಸ್ತುತ ವರ್ಷದಲ್ಲಿ 1ಲಕ್ಷದ 10 ಸಾವಿರ ರೂ. ಲಾಭಾಂಶ ಹೊಂದು ಶೇ.10 ಡಿವಿಡೆಂಡ್ ಫೋಷಿಸಲಾಯಿತು. ವಾಮದಪದವು ಕೆನರಾ ಬ್ಯಾಂಕ್ನ ಶಾಖಾ ವ್ಯವಸ್ಥಾಪಕ ಪ್ರಧಾನಮಂತ್ರಿ ಜನಧನ ಯೋಜನೆ ಹಾಗೂ ಹೈನುಗಾರಿಕೆ ಬಗ್ಗೆ ಸಾಲ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ನಿರ್ದೇಶಕರಾದ ವಿಶ್ವನಾಥ ಚೌಟ, ಅಬ್ದುಲ್ ರಝಾಕ್, ಎಂ.ಪಿ. ಶೇಖರ್, ಐ.ಬಿ.ಸಂಜಿತ್ ಕುಮಾರ್, ಪುಷ್ಪಾವತಿ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ಡಾ|ರಾಮಕೃಷ್ಣ ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ಜಯರಾಮ ನಾಯಕ್ ವರದಿ ವಾಚಿಸಿದರು. ಪ್ರಶಾಂತ್ ಕೋಟ್ಯಾನ್ ವಂದಿಸಿದರು.

