ಬಂಟ್ವಾಳ: ಆಚಾರ್ಯ ಶಂಕರ ಭಗವತ್ಪಾದರ ತತ್ವಗಳನ್ನು ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಶ್ರೀ ಶಂಕರರಿಗೆ ನೀಡುವ ಗೌರವ ಎಂದು ಮಂಗಳೂರು ಶಂಕರ ಸೇವಾ ಪ್ರತಿಷ್ಠಾನದ ಜಿಲ್ಲಾ ಕೇಂದ್ರ ಸಮಿತಿ ಅಧ್ಯಕ್ಷ ಬೊಳ್ಳಾವ ಸತ್ಯಶಂಕರ ಹೇಳಿದರು.

14bhshankarajayanthi

ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ವಠಾರದಲ್ಲಿ ಇತ್ತೀಚೆಗೆ ನಡೆದ ಶ್ರೀ ಶಂಕರ ಜಯಂತಿ ಉತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಎಸ್. ಪರಮೇಶ್ವರ ಹೊಳ್ಳ ಅಲೆತ್ತೂರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ವಿ.ಸು.ಭಟ್, ಉದ್ಯಮಿ ರಾಮ್ ಗಣೇಶ್ ಪ್ರಭು ಕೈಕುಂಜೆ ಉಪಸ್ಥಿತರಿದ್ದರು.

ಕೈಯೂರು ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುಬ್ರಹ್ಮಣ್ಯ ರಾವ್ ಅಲೆತ್ತೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಎ.ಕೃಷ್ಣ ಶರ್ಮ, ಪ್ರಧಾನ ಕಾರ್ಯದರ್ಶಿ ರಾಜಾರಾಮ ಐತಾಳ ಸಹಕರಿಸಿದರು. ಈ ಸಂದರ್ಭ ಮುಡಿಪು ಯಕ್ಷ ಸಂಜೀವಿನಿ ಟ್ರಸ್ಟ್ ಅವರಿಂದ ಯಕ್ಷಗಾನ ತಾಳಮದ್ದಳೆ ಮತ್ತು ರಾಜಾರಾಮ ಐತಾಳ್ ಮತ್ತು ಬಳಗದಿಂದ ಅಷ್ಟೋತ್ತರ ಪಠಣ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *